ಕೆರೆಯ ಮಣ್ಣು ಅಕ್ರಮವಾಗಿ ಸಾಗಾಟ;ತಡೆಯೊಡ್ಡಿದ ಗ್ರಾಮಸ್ಥರು

Apr 23, 2026 - 17:19
 0  477
ಕೆರೆಯ ಮಣ್ಣು ಅಕ್ರಮವಾಗಿ ಸಾಗಾಟ;ತಡೆಯೊಡ್ಡಿದ ಗ್ರಾಮಸ್ಥರು

ಕುಶಾಲನಗರ;ಗುಡ್ಡೆ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಳ್ಳೂರು ಗ್ರಾಮದಲ್ಲಿ ಕೆರೆ ಮಣ್ಣನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಘಟನೆ ನಡೆದಿದೆ. ಕೆರೆಯ ಮಣ್ಣನ್ನು ಖಾಸಗಿ ವ್ಯಕ್ತಿಯು ತಮ್ಮ ಜಾಗವನ್ನು ಸಮತಟ್ಟು ಮಾಡಲು ಜೆಸಿಬಿ ಇಂದ ಮಣ್ಣನ್ನು ಸಾಗಿಸುತ್ತಿದ್ದ ಸಂದರ್ಭ ಸ್ಥಳೀಯರು ತಡೆಯೊಡ್ಡಿದ ಘಟನೆ ನಡೆದಿದೆ.

ಬಳ್ಳೂರು ಹಾಗೂ ಮಾದ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಪಕ್ಕದಲ್ಲಿರುವ ಕೆರೆ ಇದಾಗಿದ್ದು ಮಣ್ಣನ್ನು ಸಾಗಿಸುತ್ತಿದ್ದರು ಸಂಬಂಧಪಟ್ಟ ಅಧಿಕಾರಿಗಳು ಮೌನ ವಹಿಸಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಸಂಧರ್ಭ ಮಾತನಾಡಿದ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಶಿವಪ್ಪ ಬಳ್ಳೂರು ಮತ್ತು ಮಾದ ಪಟ್ಟಣ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು ರಸ್ತೆ ಪಕ್ಕದ ಕೆರೆಯ ಮಣ್ಣನ್ನು ಹಗೆದು ಜಾಗವನ್ನು ಸಮತಟ್ಟು ಮಾಡುತ್ತಿದ್ದಾರೆ.

ಮಳೆಗಾಲ ಬಂದರೆ ರಸ್ತೆ ಸಂಪೂರ್ಣ ಕುಸಿದು ಬೀಳುತ್ತದೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇಂತಹ ವ್ಯಕ್ತಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಪಂಚಾಯಿತಿ ಮುಂದೆ ಗ್ರಾಮಸ್ಥರು ಎಲ್ಲರೂ ಹೋರಾಟ ಮಾಡುತ್ತೇವೆ ಎಂದರು.

ನಂತರ ಮಾತನಾಡಿದ ಸ್ಥಳೀಯ ನಿವಾಸಿ ಮಂಜುನಾಥ್ ಕೆರೆ ಮಣ್ಣನ್ನು ಅಕ್ರಮವಾಗಿ ಸಾಗಿಸುತ್ತಿದ್ದು ಇದನ್ನು ಪ್ರಶ್ನೆ ಮಾಡಿದರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೇಳಿದ್ದಾರೆ ಮಣ್ಣನು ಸಾಗಿಸಲು ಆದ್ದರಿಂದ ಮಣ್ಣು ಸಾಗಿಸುತ್ತೇವೆ ಎಂದು ಹೇಳುತ್ತಿದ್ದಾರೆ. ನಾವು ಪ್ರಶ್ನೆ ಮಾಡಿದರೆ ನಮ್ಮ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಿದ್ದಾರೆ ಕೂಡಲೇ ಇಂತ ವ್ಯಕ್ತಿಗಳ ಮೇಲೆ ಕ್ರಮ ಕೈಗೊಂಡು ಕೆರೆಯನ್ನು ಸಂರಕ್ಷಿಸಬೇಕು ಎಂದರು. ಇದೇ ಸಂದರ್ಭ ಪ್ರಕಾಶ್. ಮಂಜುನಾಥ್. ಜಗದೀಶ್. ನಂದ. ಚಂದ್ರಶೇಖರ್. ಕೃಷ್ಣ ಹಾಗೂ ಗ್ರಾಮಸ್ಥರು ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0