ಮಡಿಕೇರಿ ದಸರಾ ಬಹುಮಾನ ವಿತರಣೆ ಸಂದರ್ಭ ನಡೆದ ಘಟನೆ: ವಕೀಲ ಯಕ್ಷಿತ್ ಮೇಲೆ ಹಲ್ಲೆ ಎಂದು ಮಾನವ ಹಕ್ಕುಗಳ ಆಯೋಗ ಮತ್ತು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು
admincoorgdaily
ಮಡಿಕೇರಿ:ಮಡಿಕೇರಿ ದಸರಾ ಬಹುಮಾನ ವಿತರಣೆ ಸಂದರ್ಭ ನಡೆದ ಘಟನೆ ಸಂಬಂಧ ಬಂಧನಕ್ಕೆ ಒಳಗಾಗಿದ್ದ ವಕೀಲ ಯಕ್ಷಿತ್ ಇದೀಗ ತನ್ನ ಮೇಲೆ ಹಲ್ಲೆಯನ್ನು ಡಿ ವೈ ಎಸ್ ಪಿ ಸೂರಜ್, PSI ರಾಘವೇಂದ್ರ ಸೇರಿದಂತೆ ಪೊಲೀಸ್ ಪೇದೆಗಳು ನಡೆಸಿದ್ದಾರೆ ಎಂದು ಮಾನವ ಹಕ್ಕುಗಳ ಆಯೋಗ ಹಾಗು ಪೊಲೀಸ್ ಮಹಾ ನಿರ್ದೇಶಕರಲ್ಲಿ ದೂರು ನೀಡಿದ್ದಾರೆ.
ದಸರಾ ದಿನದ ಕೊನೆಯ ದಿನದಂದು ಗಾಂಧಿ ಮೈದಾನದಲ್ಲಿ ವಕೀಲರಾದ ಯಕ್ಷಿತ್ ಅವರ ಮೇಲೆ ಪೊಲೀಸರು ಹಲ್ಲೆಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಸುಳ್ಳು ದೂರನ್ನು ನೀಡಿದ್ದಾರೆ ಎಂದು ಆರೋಪಿಸಿ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿರುವ ಬಗ್ಗೆ ಮಾನವ ಹಕ್ಕುಗಳ ಆಯೋಗ, ಬೆಂಗಳೂರು ಹಾಗೂ ಪೊಲೀಸ್ ಮಹಾ ನಿರ್ದೇಶಕರಲ್ಲಿ DySP ಸೂರಜ್, PSI ರಾಘವೇಂದ್ರ ಸೇರಿದಂತೆ ಪೊಲೀಸ್ ಪೇದೆಗಳ ಮೇಲೆ ದೂರನ್ನು ಇದೀಗ ದಾಖಲಿಸಲಾಗಿದೆ.