ಹೊಸ್ಕೇರಿ ಗ್ರಾಮ ಪಂಚಾಯಿತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ
ಸಿದ್ದಾಪುರ: 79ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಮಡಿಕೇರಿ ತಾಲೂಕಿನ ಹೊಸ್ಕೇರಿ ಗ್ರಾಮ ಪಂಚಾಯಿತಿ ಕಚೇರಿ, ಹಾಗೂ ಅರೆಕಾಡು ಅಮೃತ ಸರೋವರ ಸಮೀಪ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಬಡುವಂಡ್ರ ಕವಿತಾ ಬೆಳ್ಳಿಯಪ್ಪ ಅವರು ಹಾಗೂ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಮುಕ್ಕಾಟಿ ಚಿದಂಬರ, ನೀರು ಮತ್ತು ನೈರ್ಮಲ್ಯ ಸಮಿತಿ ಅಧ್ಯಕ್ಷ ಬಿವೈ ಪ್ರಬುಶೇಖರ್, ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯ ಯೂಸುಫ್ ಅಲಿ,ಸದಸ್ಯರಾದ ಬೋಳಿಯಾಡೀರ ಉಷಾ ತಂಗಮ್ಮ , ಮಮತಾ, ಪಿಡಿಓ ಅಬ್ದುಲ್ಲ ಕಾರ್ಯದರ್ಶಿ ತೇಜಸ್ ಕುಮಾರ್, ಸಿಬ್ಬಂದಿಗಳಾದ ಉಮೇಶ ,ಹರೀಶ ,ಜಯರಾಮ ಸಮ್ಮುಖದಲ್ಲಿ ಧ್ವಜಾರೋಹಣ ನೆರವೇರಿಸಿ,ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.