ವಾಲ್ನೂರು-ತ್ಯಾಗತ್ತೂರು ಬದ್ರಿಯಾ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ
ಸಿದ್ದಾಪುರ: ವಾಲ್ನೂರು-ತ್ಯಾಗತೂರು ಬದ್ರಿಯಾ ಜುಮಾ ಮಸೀದಿ ಮತ್ತು ನೂರುಲ್ ಇಸ್ಲಾಂ ಮದ್ರಸ ಇದರ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಸೀದಿಯ ಖತೀಬರಾದ ರಿಯಾಸ್ ಉಸ್ತಾದರು ಪ್ರಾರ್ಥನೆ ನೆರವೇರಿಸಿದರು. ಮಸೀದಿ ಅಧ್ಯಕ್ಷರಾದ ಎ.ಎಂ ಹನೀಫ ರವರು ಧ್ವಜಾರೋಹಣವನ್ನು ನೆರವೇರಿಸಿದರು. ಮುಖ್ಯೋಪಾಧ್ಯಾಯರಾದ ಜಾಫರ್ ಉಸ್ತಾದ್ ಮಾತನಾಡಿ ಸ್ವಾತಂತ್ರ್ಯ ದಿನಾಚರಣೆಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದರು. ಕಾರ್ಯದರ್ಶಿಯಾದ ಹನೀಫ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಸಲೀಂ, ಅಬ್ದುಲ್ ರಹಮಾನ್, ಸ್ವಲಾತ್ ಕಮಿಟಿಯ ಅಧ್ಯಕ್ಷರಾದ ಅನ್ಸಾರ್ ಇದ್ದರು.