ಸಿದ್ದಾಪುರ SKSBV ರೇಂಜ್ ವತಿಯಿಂದ ಇಶ್ಕ್ ಮಜ್ಲಿಸ್ ಹಾಗೂ ತಹದೀಸ್ ಕ್ಯಾಂಪ್
ಸಿದ್ದಾಪುರ. ಮುನವ್ವಿರುಲ್ ಇಸ್ಲಾಂ ಮದರಸ ಆವರಣದಲ್ಲಿ ರೇಂಜ್ ಕನ್ವೀನರ್ ಅಜೀಜ್ ಬಾಖವಿ ಅವರ ಅಧ್ಯಕ್ಷತೆಯಲ್ಲಿ ಸಿದ್ದಾಪುರ SKSBV ರೇಂಜ್ ವತಿಯಿಂದ ಇಶ್ಕ್ ಮಜ್ಲಿಸ್ ಹಾಗೂ ತಹದೀಸ್ ಕ್ಯಾಂಪ್ ಕಾರ್ಯಕ್ರಮ ನಡೆಯಿತು.
ಎಲ್ಲರು ಪ್ರವಾದಿಯವರ. ಜೀವನ ಚರಿತ್ರೆ ಮನದಟ್ಟುಮಾಡಿ ಜೀವಿಸಬೇಕೆಂದು ಕರೆ ನೀಡಿದ ರೇಂಜ್ ಕಾರ್ಯದರ್ಶಿ ಬಶೀರ್ ಹಸನಿ ಉದ್ಘಾಟನೆ ಮಾಡಿದರು. SKJM ಕಾರ್ಯದರ್ಶಿ ಆರಿಫ್ ಫೈಝಿ SKSBV ಇದರ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಪ್ರವಾದಿಯವರನ್ನು ಅನುಸರಿಸಿ ಜೀವಿಸಬೇಕೆಂದು ಕರೆ ನೀಡಿದರು.
ಸಭೆಗೆ SKSBV ರೇಂಜ್ ಕಾರ್ಯದರ್ಶಿ ಅಫ್ರಿದ್ ಸ್ವಾಗತ ಕೋರಿದರು. ನೌಫಲ್ ಹುದವಿ, ಸಿದ್ದೀಕ್ ವಾಫಿ, ಝೈನುದ್ದೀನ್ ಫೈಝಿ, ಜಬ್ಬಾರ್ ಫೈಝಿ, ಸಿದ್ದೀಕ್ ಮುಸ್ಲಿಯಾರ್,ಕರೀಂ ಮುಸ್ಲಿಯಾರ್, ರಹ್ಮಾನ್ ಫಾಳಿಲಿ, ಉಸೈನ್ ಅಝ್ಹರಿ ಮತ್ತಿತ್ತರು ಹಾಜರಿದ್ದರು. ರೇಂಜ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಮದರಸ ವಿದ್ಯಾರ್ಥಿಗಳಿಂದ ಇಶ್ಕ್ ಮಜ್ಲಿಸ್.ಲ ಬುರ್ದಾ,ಕವಾಲಿ ಕಾರ್ಯಕ್ರಮ ನಡೆಯಿತು.