ಜೆಸಿಐ ಕುಶಾಲನಗರ ಕಾವೇರಿಗೆ ಅಭಿವೃದ್ಧಿ ಮತ್ತು ಬೆಳವಣಿಗೆ ಸಮ್ಮೇಳನದಲ್ಲಿ 3ನೇ ಸ್ಥಾನ

ಜೆಸಿಐ ಕುಶಾಲನಗರ ಕಾವೇರಿಗೆ ಅಭಿವೃದ್ಧಿ ಮತ್ತು ಬೆಳವಣಿಗೆ ಸಮ್ಮೇಳನದಲ್ಲಿ 3ನೇ ಸ್ಥಾನ

ಕುಶಾಲನಗರ: ಶೃಂಗೇರಿಯಲ್ಲಿ ಭಾನುವಾರ ನಡೆದ ಜೆಸಿಐ ಇಂಡಿಯಾದ ವಲಯ- 14 ರ ಅಭಿವೃದ್ಧಿ ಮತ್ತು ಬೆಳವಣಿಗೆ ಸಮ್ಮೇಳನ – ವಿಸ್ತಾರ ಕಾರ್ಯಕ್ರಮದಲ್ಲಿ, ಜೆಸಿಐ ಕುಶಾಲನಗರ ಕಾವೇರಿ ಘಟಕವು ಉತ್ತಮ ಸೇವಾ ಕಾರ್ಯಗಳು ಹಾಗೂ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಉತ್ತಮ ಸಾಧನೆ ಮಾಡಿದೆ.

 ಈ ಸಾಧನೆಗೆ ಕುಶಾಲನಗರ ಜೆಸಿಐ ಕಾವೇರಿ ಸಂಸ್ಥೆಗೆ 3ನೇ ಸ್ಥಾನ ಲಭಿಸಿದೆ ಎಂದು ಸಂಸ್ಥೆಯ ಅಧ್ಯಕ್ಷೆ ತೇಜ ದಿನೇಶ್ ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ದೇವನಹಳ್ಳಿ ಘಟಕ ಪ್ರಥಮ ಹಾಗೂ ವಿಜಯಪುರ ಘಟಕ ದ್ವಿತೀಯ ಸ್ಥಾನ ಗಳಿಸಿವೆ. ಈ ಸಂದರ್ಭದಲ್ಲಿ ಜೆಸಿಐ ಕುಶಾಲನಗರ ಕಾವೇರಿ ಸಂಸ್ಥೆಗೆ ಜೆಸಿಐ ರಾಷ್ಟ್ರೀಯ ಅಧ್ಯಕ್ಷ ಅಂಕುರ್ ಜೂನ್ಜುನ್ ವಾಲಾ ಅವರು ಜೆಸಿಐ ಕುಶಾಲನಗರ ಕಾವೇರಿ ಅಧ್ಯಕ್ಷೆ ತೇಜ ದಿನೇಶ್ ಮತ್ತು ತಂಡದವರಿಗೆ ಟ್ರೋಫಿ ಮತ್ತು ಬಹುಮಾನ ವಿತರಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ವಲಯ ಉಪಾಧ್ಯಕ್ಷ ಜಗದೀಶ್ ಬಿ, ವಲಯ ಸಮನ್ವಯಾಧಿಕಾರಿ ಎಂ.ಜೆ,ರಜನಿಕಾಂತ್ , ಜೆಸಿಐ ವಲಯ ಅಲ್ಯೂಮಿನಿಯಂ ಕ್ಲಬ್ ನ ಮಾಜಿ ಅಧ್ಯಕ್ಷ ಎಂ.ಡಿ, ರಂಗಸ್ವಾಮಿ, ಕಾರ್ಯದರ್ಶಿ ಡಿ. ಪುನೀತ್ , ಸದಸ್ಯರಾದ ಕಾವ್ಯ ಜಗದೀಶ್, ಕೋಮಲ ರಜನಿಕಾಂತ್, ಸಿ. ರವಿ , ಶ್ರೀನಿವಾಸ್ ಹಾಗೂ ಸದಸ್ಯರು ಇದ್ದರು. ಈ ವರ್ಷ ಜೆಸಿಐ ಕುಶಾಲನಗರ ಕಾವೇರಿ ಘಟಕವು ಶನಿವಾರಸಂತೆ ಸಿರಿ ಎಂಬ ಹೊಸ ಘಟಕವನ್ನು ಸ್ಥಾಪಿಸಿದ್ದು, ಇದು ಘಟಕದ ಸಾಧನೆಗೆ ಮತ್ತೊಂದು ಮೈಲುಗಲ್ಲಾಗಿದೆ ಎಂದು ಸಂಸ್ಥೆಯ ವಲಯ ಸಮನ್ವಯಾಧಿಕಾರಿ ರಜನೀಕಾಂತ್ ತಿಳಿಸಿದ್ದಾರೆ.