ಕೊಟ್ಟಮುಡಿ ಮರ್ಕಝ್ ನಲ್ಲಿ ಜಲಾಲಿಯ ವಾರ್ಷಿಕ ಹಾಗೂ ಮಹ್ಮೂದ್ ಉಸ್ತಾದ್ ಅನುಸ್ಮರಣೆ
admincoorgdaily
ಕಡಂಗ: ನಾಪೋಕ್ಲು ಸಮೀಪದ ಕೊಟ್ಟಮುಡಿಯ ಮರ್ಕಝ್ ಉಲ್ ಹಿದಾಯ ಇವರ ಆಶ್ರಯದಲ್ಲಿ ಬೃಹತ್ ಜಲಾಲಿಯ ವಾರ್ಷಿಕ ಮತ್ತು ಮಹಮೂದ್ ಉಸ್ತಾದ್ ಅನುಸ್ಮರಣೆ ಕಾರ್ಯಕ್ರಮವನ್ನು ಸಂಸ್ಥೆಯಲ್ಲಿ ನಡೆಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷರಾದ ಸಯ್ಯದ್ ಆಟಕೋಯ ತಂಙಳ್ ಕುಂಬೋಳ್ ಆಗಮಿಸಿ ಪ್ರಾರ್ಥನೆಗೆ ನೇತೃತ್ವ ವಹಿಸಿದ್ದರು ಕಾರ್ಯಕ್ರಮದಲ್ಲಿ ಸೈಯದ್ ಜಹಫರ್ ಸಾದಿಕ್ ತಂಙಳ್, ಜಸಿಲ್ ಕಾಮಿಲ್ ಸಕಾಪಿ, ಕಿಲ್ಲೂರ್ ತಂಙಳ್, ಇಲ್ಲ್ಯಾಸ್ ತಂಙಳ್ ಉಪಸ್ಥಿತರಿದ್ದರು.