ಗೋಣಿಕೊಪ್ಪ: ದಸರಾ ಜನೋತ್ಸವದ ಅಧ್ಯಕ್ಷರಾಗಿ ಕೆ.ಜಿ ರಾಮಕೃಷ್ಣ ಆಯ್ಕೆ

ಗೋಣಿಕೊಪ್ಪ: ದಸರಾ ಜನೋತ್ಸವದ ಅಧ್ಯಕ್ಷರಾಗಿ ಕೆ.ಜಿ ರಾಮಕೃಷ್ಣ ಆಯ್ಕೆ
ರಾಮಕೃಷ್ಣ

ಗೋಣಿಕೊಪ್ಪ: ಶ್ರೀ ಕಾವೇರಿ ದಸರಾ ಸಮಿತಿಯ 47ನೇ ದಸರಾ ಜನೋತ್ಸವದ ಅಧ್ಯಕ್ಷರಾಗಿ ಗ್ರಾ.ಪಂ. ಸದಸ್ಯ ಕೆ.ಜಿ. ರಾಮಕೃಷ್ಣ ಆಯ್ಕೆಯಾಗಿದ್ದಾರೆ. ಗುರುವಾರ ನಡೆದ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರ ಒಮ್ಮತ ಈ ಆಯ್ಕೆ ನಡೆದಿದೆ. ಈ ಸಂದರ್ಭ ಮಾತನಾಡಿದ ನೂತನ ಅಧ್ಯಕ್ಷರು ಜನೋತ್ಸವವನ್ನು ವಿಭಿನ್ನವಾಗಿ ಆಚರಿಸಲು ಸರ್ವರ ಸಹಕಾರದೊಂದಿಗೆ ಮುಂದುವರೆಯುವುದಾಗಿ ತಿಳಿಸಿದ್ದಾರೆ. ಆಯ್ಕೆಯ ಸಂದರ್ಭ ಗ್ರಾ.ಪಂ. ಅಧ್ಯಕ್ಷ ಪ್ರಮೊದ್ ಗಣಪತಿ, ಉಪಾಧ್ಯಕ್ಷೆ ಮಂಜುಳ, ಪಿ.ಡಿ.ಓ ತಿಮ್ಮಯ್ಯ ಹಾಗೂ ಸದಸ್ಯರುಗಳು ಹಾಜರಿದ್ದರು.