ಕಡಂಗ: 79ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ

ಕಡಂಗ: 79ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ

ಕಡಂಗ:368 ನೇ ಅರಪಟ್ಟು ಮತ್ತು ಕರಡ ಸಹಕಾರ ವಿವಿಧೋದ್ದೇಶ ಧವಸ ಭಂಡಾರದ ವತಿಯಿಂದ 79ನೇ ಸ್ವಾತಂತ್ರೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ದ್ವಜಾರೋಹಣವನ್ನು ಸಂಘದ ಉಪಾಧ್ಯಕ್ಷರಾದ ಮುಕ್ಕಾಟೀರ ಸಿ ಕಿರಣ್ ಬೋಪಯ್ಯ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಕೋಡೀರ ಪ್ರಸನ್ನ ತಮ್ಮಯ್ಯ ಹಾಗೂ ಕಡಂಗ ಕೆಡಿಸಿಸಿ ಬ್ಯಾಂಕ್ ನ ವ್ಯವಸ್ಥಾಪಕರಾದ ಶ್ರೀ ಭಾಸ್ಕರ್ ರವರು ಹಾಜರಿದ್ದರು. ಸಭೆಯನ್ನು ಉದ್ದೇಶಿಸಿ ನಿವೃತ್ತ ಮುಖ್ಯೋಪಾಧ್ಯಾಯರಾದ ಐ ಎಂ ಪಾರ್ವತಿ ರವರು ಭಾಷಣ ಮಾಡಿದರು.ಸಭೆಯಲ್ಲಿ ಸಂಘದ ನಿರ್ದೇಶಕರಾದ ಪಾಲಚಂಡ ವಿನು ಮಾದಪ್ಪ , ದೇಯೀರ ಸುಭಾಷ್ ಭೀಮಯ್ಯ, ಕೈಪಂಗಡ ವಿಠಲ ಉತ್ತಪ್ಪ, ನೆರ್ಪಂಡ ದೀನಾ ನಾಣಯ್ಯ, ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ.ಯು ಮೊಹಮದ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ವರದಿ: ನೌಫಲ್