ಪೊನ್ನಂಪೇಟೆಯಲ್ಲಿ ಗಮನ ಸೆಳೆದ ಕಕ್ಕಡ ಮ್ಯಾರಥಾನ್ ಸ್ಪರ್ಧೆ

ಪೊನ್ನಂಪೇಟೆಯಲ್ಲಿ ಗಮನ ಸೆಳೆದ ಕಕ್ಕಡ ಮ್ಯಾರಥಾನ್ ಸ್ಪರ್ಧೆ

ಪೊನ್ನಂಪೇಟೆ :- ತತ್ವ ಮಸಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪೊನ್ನಂಪೇಟೆಯ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಿಂದ ಬೆಕ್ಕಸೊಡ್ಲೂರು ಶ್ರೀ ಶಾರದ ಪ್ರೌಢಶಾಲೆಯವರೆಗೆ ಕಕ್ಕಡ ಮ್ಯಾರಥಾನ್ ಸ್ಪರ್ಧೆ ನಡೆಯಿತು. ಮಾಸ್ಟರ್ ಅಥ್ಲೆಟಿಕ್ ಅಸೋಸಿಯೇಷನ್ ಕೊಡಗು ಮತ್ತು ಹುದಿಕೇರಿ ಅಂಜಿಕೇರಿ ನಾಡ್ ಸಂಸ್ಥೆಯು ವತಿಯಿಂದ ಮ್ಯಾರಥಾನ್ ಓಟದ ಸ್ಪರ್ಧೆಗೆ ಕೈಜೋಡಿಸಿದ್ದರು. 10, ಕಿಲೋಮೀಟರ್, 5 ಕಿಲೋಮೀಟರ್, 3ಕಿಲೋಮೀಟರ್, ಹಾಗೂ 1 ಕಿಲೋಮೀಟರ್ ಗಳ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು. ಪೊನ್ನಂಪೇಟೆಯ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಬೆಳಗ್ಗೆ 6 ಗಂಟೆಗೆ ನೋಂದಾವಣಿ ಪ್ರಾರಂಭವಾಗಿ, 7.30 ಗಂಟೆಗೆ ಮ್ಯಾರಥಾನ್ ಸ್ಪರ್ಧೆ ಪ್ರಾರಂಭವಾಯಿತು.

 ಒಂದು ಕಡೆಯಿಂದ ಮತ್ತೊಂದು ಕಡೆಗೆ ಕರೆ ತರಲು ಬಸ್ ವ್ಯವಸ್ಥೆ, ಆಂಬುಲೆನ್ಸ್ ವ್ಯವಸ್ಥೆ ಹಾಗೂ ದಾರಿ ಉದ್ದಕ್ಕೂ ಸ್ಪರ್ಧಿಗಳಿಗೆ ಕುಡಿಯಲು ನೀರಿನ ವ್ಯವಸ್ಥೆ, ಮುಂಜಾಗ್ರತ ವಾಹನಗಳ ವ್ಯವಸ್ಥೆಯನ್ನು ಮಾಡಲಾಗಿತ್ತು. ಸ್ಪರ್ಧೆ ಮುಕ್ತಾಯವಾಗುವ ಸ್ಥಳದಲ್ಲಿ ವಿಡಿಯೋ ಚಿತ್ರೀಕರಣ ಮಾಡುವುದರ ಮೂಲಕ ಯಾವುದೇ ಗೊಂದಲಕ್ಕೆ ಅವಕಾಶ ನೀಡದಂತೆ ವ್ಯವಸ್ಥೆಯನ್ನು ಮಾಡಲಾಗಿತ್ತು.

ತತ್ವಮಹಿ ಚಾರಿಟೇಬಲ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಉಳುವಂಗಡ ಲೋಹಿತ್ ಭೀಮಯ್ಯ ಅವರು ಮಾತನಾಡಿ, ಶ್ರೀ ಸತ್ಯ ಸಾಹಿ ಲೋಕ ಸೇವಾ ಟ್ರಸ್ಟ್ ನೊಂದಿಗೆ ಗಂಭೀರ ಕಾಯಿಲೆಯಿಂದ ಬಳಲುತಿರುವವರಿಗೆ ಟ್ರಸ್ಟ್ ಮುಖಾಂತರ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ ಎಂದರು. ಡಾ. ಮಾತಂಡ ಅಯ್ಯಪ್ಪ ಅವರು ಮಾತನಾಡಿ, ಇಂದಿನ ದಿನಗಳಲ್ಲಿ ಉತ್ತಮ ಆರೋಗ್ಯಕ್ಕಾಗಿ ಆಟೋಟಗಳಲ್ಲಿ ಭಾಗವಹಿಸುವುದು ಅತಿ ಮುಖ್ಯ. ಎಲ್ಲರೂ ದೈಹಿಕ ಸಾಮರ್ಥ್ಯ ಎನ್ನುವುದನ್ನು ತಮ್ಮ ಹವ್ಯಾಸವಾಗಿ ಬೆಳೆಸಿಕೊಂಡು ಇಂತಹ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಎಂದು ಸಲಹೆ ನೀಡಿದರು.

 ಜಬ್ಬೂಮಿ ಚಾರಿಟೇಬಲ್ ಟ್ರಸ್ ಸಂಚಾಲಕ ಚೊಟ್ಟೆಕ್ ಮಾಡ ರಾಜೀವ್ ಬೋಪಯ್ಯ ಅವರು ಮಾತನಾಡಿ, ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ ತತ್ವಮಹಿ ಟ್ರಸ್ಟ್ ನೊಂದಿಗೆ ಸಮಾಜಮುಖಿ ಕಾರ್ಯಗಳಲ್ಲಿ ಕೈ ಜೋಡಿಸುತ್ತಾ ಬಂದಿದೆ ಎಂದರು.

ಬೆಕ್ಕೆಸೊಡ್ಲೂರು ಶಾರದಾ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷ ಕುಜ್ಞಿಮಾಡ ಸದಾಶಿವ ಅವರು ಮಾತನಾಡಿ, ಮನೆಯಲ್ಲಿ ಪೋಷಕರು ಮಕ್ಕಳಿಗೆ ಮೊಬೈಲ್ ನೀಡುವ ಬದಲಾಗಿ ಬೇರೆ ಬೇರೆ ತರಹದ ಕ್ರೀಡೆಗಳ ಬಗ್ಗೆ ಮಾಹಿತಿ ನೀಡಿ ಆಟಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಬೇಕು ಎಂದರಲ್ಲದೇ, ಶಾರದಾ ವಿದ್ಯಾ ಸಂಸ್ಥೆಯ ಕಟ್ಟಡ ದುರಸ್ಥಿ ಕಾರ್ಯಕ್ಕೆ ದಾನಿಗಳು ನೆರವು ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭ ತತ್ವಮಹಿ ಚಾರಿಟೇಬಲ್ ಟ್ರಸ್ಟ್ ಹಾಗೂ ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮೈಸೂರು ಬೃಂದಾವನ ಆಸ್ಪತ್ರೆಯ ನಿರ್ದೇಶಕ ಡಾಕ್ಟರ್ ಮಾತಂಡ ಅಯ್ಯಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮ್ಯಾರಥಾನ್ ಸ್ಪರ್ಧೆಯಲ್ಲಿ ಪಾಲೊಂಡಿದ್ದ ಎಲ್ಲಾ ಸ್ಪರ್ಧಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಸ್ಪರ್ಧಿಗಳಿಗೆ ತತ್ವಮಹಿ ಚಾರಿಟೇಬಲ್ ಟ್ರಸ್ಟ್ ಹಾಗೂ ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬಹುಮಾನ ನೀಡಲಾಯಿತು.

ಈ ಸಂದರ್ಭ ಚೆಪ್ಪುಡಿರ ಪೃಥ್ವಿ ಪೂನಚ್ಚ, ಬಲ್ಯಮಿದೇರಿರ ಪ್ರಕಾಶ್, ಮೂಕಳೇರ ಮೀರಾ ಈಶ್ವರ್, ಉಳುವಂಗಡ ಸ್ವೀಟಿ ಭೀಮಯ್ಯ,, ಚಟ್ಟಂಡ ಲೇಖನ, ಅಂಜಿಕೇರಿ ನಾಡ್ ಸಂಸ್ಥೆಯ ಪದಾಧಿಕಾರಿಗಳು, ಮಾಸ್ಟರ್ ಅಥ್ಲೇಟಿಕ್ ಅಶೋಸಿಯೇಶನ್ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು. ವರದಿ:ಚಂಪಾ ಗಗನ, ಪೊನ್ನಂಪೇಟೆ