ಚೆಟ್ಟಿಮಾನಿ ಪದಕಲ್ ಗ್ರಾಮದಲ್ಲಿ ಕುಂದಚೇರಿ ಬಿಜೆಪಿ ಶಕ್ತಿ ಕೇಂದ್ರದಿಂದ ಕಾರ್ಗಿಲ್ ವಿಜಯೋತ್ಸವ

ಚೆಟ್ಟಿಮಾನಿ ಪದಕಲ್ ಗ್ರಾಮದಲ್ಲಿ ಕುಂದಚೇರಿ ಬಿಜೆಪಿ ಶಕ್ತಿ ಕೇಂದ್ರದಿಂದ ಕಾರ್ಗಿಲ್ ವಿಜಯೋತ್ಸವ

ಭಾಗಮಂಡಲ : ಚೆಟ್ಟಿಮಾನಿ ಪದಕಲ್ ಗ್ರಾಮದಲ್ಲಿ ಕಾರ್ಗಿಲ್ ವಿಜಯೋತ್ಸವನ್ನು ಕುಂದಚೇರಿ ಬಿಜೆಪಿ ಶಕ್ತಿ ಕೇಂದ್ರ ಆಚರಿಸಿತು. ಶಕ್ತಿ ಕೇಂದ್ರದ ಪ್ರಮುಖ್ ಶರತ್ ಪದಕಲ್ಲು ನೇತೃತ್ವ ದಲ್ಲಿ ಪದಕಲ್ ಗ್ರಾಮಸ್ಥರು ಕಾರ್ಗಿಲ್ ನಲ್ಲಿ ಬಾಗವಹಿಸಿದ ಮಂಗೇರಿರಾ ಮೇಜರ್ ವಿನೋದ್ ಮುತ್ತಣ್ಣ ಭಾವಚಿತ್ರಕ್ಕೆ ನಮನ ಸಲ್ಲಿಸಿದರು. ನಂತರ, ಮೇಜರ್ ಮುತ್ತಣ್ಣ ಅವರ ಶೌರ್ಯ, ಪರಕ್ರಮ ದೇಶ ಭಕ್ತಿಯ ಬಗ್ಗೆ ಕುಟುಂಬದ ಹಿರಿಯರು ಶ್ಲಾಘಿಸಿದರು.

 ಶರತ್ ಪದಕಲ್ಲು ಮಾತಾನಾಡಿ, ಭಾರತದ ಗಡಿಯಲ್ಲಿ ಜೀವ ಮತ್ತು ಜೀವನವನ್ನು ಪಣಕ್ಕಿಟ್ಟು ಹಗಲಿರುಳೆನ್ನೆದೆ ಶ್ರಮಿಸುತ್ತಿರುವ ನಮ್ಮ ದೇಶದ ಯೋಧರಿಂದಾಗಿ ನಾವು ಇಂದು ಸುರಕ್ಷಿತರಾಗಿದ್ದೇವೆ. ದೇಶ ರಕ್ಷಣೆಗಾಗಿ ಹುತಾತ್ಮರಾದ ಪ್ರತಿಯೊಬ್ಬ ಯೋಧರಿಗೂ ನಮಿಸುತ್ತಾ, ಇಂದೂ ಕೂಡ ದೇಶದ ಗಡಿಯಲ್ಲಿ ಹೋರಾಟ ನಡೆಸುತ್ತಿರುವ ಯೋಧರಿಗೆ ನಾವು ಚಿರಋಣಿಯಾಗಿರಬೇಕು. ಇಂತಹ ವೀರ ಯೋಧರನ್ನು ಸ್ಫೂರ್ತಿಯಾಗಿಸಿಕೊಂಡು, ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಸೈನ್ಯಕ್ಕೆ ಸೇರುವ ಮೂಲಕ ದೇಶ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ಈ ಕಾರ್ಯಕ್ರಮ ಯೋದನ ಹುಟ್ಟೂರಿನಲ್ಲಿ ನಡೆಯದೆ ಇರುವುದಕ್ಕೆ ಮರುಗಿದರು, ಮುಂದಿನ ವರ್ಷ್ ದೊಡ್ಡ ಮಟ್ಟದಲ್ಲಿ ವಿಜಯೋತ್ಸವ ಅಚಾರಿಸುವ ಭರವಸೆ ನೀಡಿದರು. ಪಂಚಾಯತಿ ಅಧ್ಯಕ್ಷ ದಿನೇಶ್, ಮಂಗೇರಿರಾ ವಿಜು,ಕಾವೇರಿ, ಇರಪ್ಪ ,ಮಣಿ, ಸೋಮಯ್ಯ ಜಗದೀಶ್, ಗಣೇಶ್,ಸಾವಿತ್ರಿ ಗಣೇಶ್, ಪುನೀತ್, ನಂಗಾರು ತೇಜಸ್ ಚಿಕ್ಕಿ ,ಯುವ ಮೋರ್ಚಾ ಅಧ್ಯಕ್ಷ ಪರಶು ಸುಳ್ಯಕೋಡಿ , ಬೂತ್ ಅಧ್ಯಕ್ಷ ಪುರುಷೋತ್ತಮ್,ಚಂದ್ರ ಪಾಣಾತಲೆ, ಸುರೇಶ್ ಪೂಜಾರಿ, ಕಾರ್ಯದರ್ಶಿಗಳಾದ ಸುಬ್ರಮಣಿ, ಚಿದು ಅಮೆ, ಹೇಮಂತ್ ಮುಕ್ಕಾಟಿ,ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಅನಿತಾ, ಕೃಷಿ ಉತ್ಪನ ಸಮಿತಿ ಅಧ್ಯಕ್ಷ ಶ್ರೀಧರ್ ಡಬ್ಬಡ್ಕ, ನಿರ್ದೇಶಕರುಗಳಾದ ಶರತ್ ಶೆಟ್ಟಿ, ಪೊನ್ನೆಟಿ ಪ್ರಸನ್ನ ಕುಮಾರ್, ಮತ್ತು ಕಾರ್ಯರ್ತರು ಗ್ರಾಮಸ್ಥರು ಇದ್ದರು.