Kodagu

ಆನೆ, ಹುಲಿ ದಾಳಿ ಸೇರಿ ಜಿಲ್ಲೆಯ ಸಮಸ್ಯೆ ಬಗೆಹರಿಸಲು ಕೊಡಗಿನ ಶಾಸಕರಿಗೆ ಸಚಿವ ಸ್ಥಾನ ಅಗತ್ಯ; ಕೆ.ಎ.ಆದಂ ಒತ್ತಾಯ

admincoorgdaily

ಆನೆ, ಹುಲಿ ದಾಳಿ ಸೇರಿ ಜಿಲ್ಲೆಯ ಸಮಸ್ಯೆ ಬಗೆಹರಿಸಲು ಕೊಡಗಿನ ಶಾಸಕರಿಗೆ ಸಚಿವ ಸ್ಥಾನ ಅಗತ್ಯ; ಕೆ.ಎ.ಆದಂ ಒತ್ತಾಯ

ಮಡಿಕೇರಿ: ಆನೆ, ಹುಲಿ ದಾಳಿ ಸೇರಿ ಜಿಲ್ಲೆಯ ಸಮಸ್ಯೆ ಬಗೆಹರಿಸಲು ಕೊಡಗಿನ ಶಾಸಕರಿಗೆ ಸಚಿವ ಸ್ಥಾನ ಅಗತ್ಯ ಎಂದು ಭೂಮಾಲೀಕರ ಹಾಗೂ ಮರ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಕೆ.ಎ.ಆದಂ ಒತ್ತಾಯಿಸಿದರು.

 ಜಿಲ್ಲೆಯ ಸಮಸ್ಯೆ ಅರಿಯದ ಶಾಸಕರ ಬದಲು ಡಾ.ಮಂತರ್ ಗೌಡ, ಎ.ಎಸ್.ಪೊನ್ನಣ್ಣ ಅವರಿಗೆ ಮಂತ್ರಿ ಸ್ಥಾನ ನೀಡಿದರೆ ಪರಿಹಾರ ಸಿಗುತ್ತದೆ ಎಂದರು.

ಸಂಘದ ಅಧ್ಯಕ್ಷ ಅರವಿಂದ ಕುಟ್ಟಪ್ಪ ಮಾತನಾಡಿ, ೧೯೫೬ರಿಂದ ಎಲ್ಲ ಸರ್ಕಾರಗಳೂ ಕೊಡಗಿಗೆ ಸಚಿವ ಸ್ಥಾನ ನೀಡಿದ್ದು, ಈ ಸಂಪ್ರದಾಯ ಮುಂದುವರೆಸಬೇಕು. ೨೦೨೩ರಲ್ಲಿ ಆಯ್ಕೆಯಾದ ಡಾ.ಮಂತರ್ ಗೌಡ, ಎ.ಎಸ್.ಪೊನ್ನಣ್ಣ ೩ ವರ್ಷದಲ್ಲಿ ಕೋಟಿ ಅನುದಾನ ತಂದು ಜಿಲ್ಲೆ ಅಭಿವೃದ್ಧಿಪಡಿಸಿದ್ದಾರೆ. ಸಚಿವ ಸ್ಥಾನ ಸಿಕ್ಕರೆ ಜಿಲ್ಲೆ ಮತ್ತಷ್ಟು ಬೆಳೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ಹಂಸ, ಪೂವಣ್ಣ, ಯಹ್ಯಾ, ಅಶ್ರಫ್ ಇದ್ದರು.