Kodagu

ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಜಿಸಿಸಿ ವಾರ್ಷಿಕ ಮಹಾಸಭೆ;ನೂತನ ಪದಾಧಿಕಾರಿಗಳ ಆಯ್ಕೆ

admincoorgdaily

ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಜಿಸಿಸಿ ವಾರ್ಷಿಕ ಮಹಾಸಭೆ;ನೂತನ ಪದಾಧಿಕಾರಿಗಳ ಆಯ್ಕೆ

ವರದಿ :ಝಕರಿಯ ನಾಪೋಕ್ಲು

ನಾಪೋಕ್ಲು :ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಜಿಸಿಸಿಯ ವಾರ್ಷಿಕ ಮಹಾಸಭೆ ಇತ್ತೀಚೆಗೆ ಯಶಸ್ವಿಯಾಗಿ ನಡೆಯಿತು. ಜಿ.ಸಿ.ಸಿ.ರಾಷ್ಟ್ರಗಳ ವಿವಿಧ ಭಾಗಗಳಿಂದ ಸದಸ್ಯರು ಉತ್ಸಾಹಭರಿತವಾಗಿ ಸಭೆಯಲ್ಲಿ ಭಾಗವಹಿಸಿದರು.

 ವೆಲ್ಫೇರ್ ಜಿಸಿಸಿ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ ಕೊಟ್ಟಮುಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯನ್ನು ಆಡಳಿತ ವಿಭಾಗದ ಅಧ್ಯಕ್ಷರಾದ ಸಯ್ಯಿದ್ ಆಬಿದ್ ತಂಙಳ್ ಎಮ್ಮೆಮಾಡು ಉದ್ಘಾಟಿಸಿ ಮಾತನಾಡಿ, ಸಂಘಟನೆಯ ಏಕತೆ,ಸೇವಾ ಮನೋಭಾವ ಹಾಗೂ ಸಮುದಾಯದ ಅಭಿವೃದ್ಧಿಯಲ್ಲಿ ಸಂಘಟನೆಯ ಪಾತ್ರವನ್ನು ವಿವರಿಸಿದರು.

 ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಅಯ್ಯಂಗೇರಿ (ಕುವೈತ್)ಕಳೆದ ಸಾಲಿನ ವರದಿಯನ್ನು ಸಭೆಯಲ್ಲಿ ಮಂಡಿಸಿದರು.ಸಂಘಟನೆಯ ಸೇವಾ ಕಾರ್ಯಕ್ರಮಗಳು, ಶಿಕ್ಷಣ ಸಹಾಯ,ದಾನಧರ್ಮ ಕಾರ್ಯಗಳು ಮತ್ತು ಸಾಮಾಜಿಕ ಚಟುವಟಿಕೆಗಳ ವಿವರಗಳನ್ನು ವಿವರಿಸಿದರು. ಕೋಶಾಧಿಕಾರಿ ಹಂಝ ಮುಸ್ಲಿಯಾರ್ ಚೋಕಂಡಳ್ಳಿ ಲೆಕ್ಕಪತ್ರಗಳನ್ನು ಮಂಡಿಸಿ ಆದಾಯ-ವ್ಯಯದ ವಿವರಗಳನ್ನು ಸ್ಪಷ್ಟಪಡಿಸಿದರು.

ಸದಸ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಲೆಕ್ಕಪತ್ರಗಳನ್ನು ಅಂಗೀಕರಿಸಿದರು. ಸಭೆಯ ಅಧ್ಯಕ್ಷತೆ ವಹಿಸಿ ಅಬೂಬಕ್ಕರ್ ಹಾಜಿ ಕೊಟ್ಟಮುಡಿ ಅವರು ಮಾತನಾಡಿ ಎಲ್ಲಾ ಸದಸ್ಯರ ಸಹಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು ಹಾಗೂ ಮುಂದಿನ ಗುರಿಗಳನ್ನು ಸಾಧಿಸಲು ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಕರೆ ನೀಡಿದರು.

ಸಭೆಯ ಉಸ್ತುವಾರಿಗಳಾಗಿ ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ,ಸದಸ್ಯರಾದ ಮಜೀದ್ ಮುಸ್ಲಿಯಾರ್ ನಿರ್ವಹಿಸಿ ನಂತರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಶಿಕ್ಷಣ ವಿಭಾಗದ ಅಧ್ಯಕ್ಷರಾದ ಬಶೀರ್ ಸಖಾಫಿ ಪ್ರಾರ್ಥಿಸಿ,ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಅಯ್ಯಂಗೇರಿ ಸ್ವಾಗತಿಸಿ,ನೂತನ ಪ್ರಧಾನ ಕಾರ್ಯದರ್ಶಿ ಆಬಿದ್ ಕಂಡಕ್ಕರೆ ಸರ್ವರನ್ನು ವಂದಿಸಿದರು.

 2026-28 ಸಾಲಿನ ನೂತನ ಪದಾಧಿಕಾರಿಗಳು ಸಲಹಾ ಮಂಡಳಿ ಅಧ್ಯಕ್ಷರಾಗಿ ಅಬೂಬಕ್ಕರ್ ಹಾಜಿ ಕೊಟ್ಟಮುಡಿ (ಯುಎಇ)ಸದಸ್ಯರುಗಳಾಗಿ ಸಯ್ಯಿದ್ ಆಬಿದ್ ತಂಙಳ್ (ಒಮಾನ್), ಅಲಿ ಮುಸ್ಲಿಯಾರ್ (ಬಹರೈನ್), ಹಫೀಲ್ ಉಮ್ಮರ್ ಸಖಾಫಿ(ಖತಾರ್),ಉಸ್ಮಾನ್ ಹಾಜಿ(ಯುಎಇ ) ಅಧ್ಯಕ್ಷರಾಗಿ ಅಬ್ದುಲ್ ಜಲೀಲ್ ನಿಜಾಮಿ(ಯುಎಇ)ಪ್ರಧಾನ ಕಾರ್ಯದರ್ಶಿಯಾಗಿ ಆಬಿದ್ ಕಂಡಕ್ಕರೆ(ಕೆಎಸ್ಎ),ಕೋಶಾಧಿಕಾರಿಯಾಗಿ ಇಸ್ಮಾಯಿಲ್ ಅಯ್ಯಂಗೇರಿ (ಕುವೈತ್)ಉಪಾಧ್ಯಕ್ಷರಾಗಿ ಉಮ್ಮರ್ ಸಖಾಫಿ(ಒಮಾನ್), ರಫೀಕ್ ಹಾಜಿ ಚಾಮಿಯಾಲ್ (ಯುಎಇ ), ಮುಸ್ತಫಾ ಕಡಂಗ (ಕೆಎಸ್ಎ)ಕಾರ್ಯದರ್ಶಿಗಳಾಗಿ ಹಾರಿಸ್ ಕಿಕ್ಕರೆ (ಖತಾರ್), ರಿಯಾಝ್ ಕೊಂಡಂಗೇರಿ(ಯುಎಇ),ಸಂಘಟನೆಯ ಅರ್ಗನೇಷಿಗ್ ವಿಭಾಗದ ಅಧ್ಯಕ್ಷರಾಗಿ ಬಶೀರ್ ಸಖಾಫಿ(ಕುವೈತ್) ಕಾರ್ಯದರ್ಶಿಯಾಗಿ ಮುಜೀಬ್ ಕಡಂಗ ಯುಎಇ,ಶಿಕ್ಷಣ ವಿಭಾಗದ ಅಧ್ಯಕ್ಷರಾಗಿ ಖಾಸಿಂ ಸಖಾಫಿ ಕೆ ಎಸ್ಎ,ಕಾರ್ಯದರ್ಶಿ ಯೂಸುಫ್ ಸಖಾಫಿ(ಖತಾರ್) ಸಾಂತ್ವನ ವಿಭಾಗ ಅಧ್ಯಕ್ಷರಾಗಿ ಹಂಝಾ ಮುಸ್ಲಿಯಾರ್ ಕೆಎಸ್ಎ ಕಾರ್ಯದರ್ಶಿಯಾಗಿ ಅಬ್ಬಾಸ್ ಸಖಾಫಿ (ಖತಾರ್) ಮಾಧ್ಯಮ ವಿಭಾಗದ ಅಧ್ಯಕ್ಷರಾಗಿ ಇಸ್ಮಾಯಿಲ್ ಮುರ್ನಾಡ್ ಯುಎಇ ಕಾರ್ಯದರ್ಶಿಯಾಗಿ ಶಂಸುದ್ದೀನ್ ಕೆಎಸ್ಎ, ನಿರ್ವಹಣಾ ವಿಭಾಗದ ಅಧ್ಯಕ್ಷರಾಗಿ ಹನೀಫ್ (ಕುವೈತ್) ಕಾರ್ಯದರ್ಶಿಯಾಗಿ ರಫೀಕ್ ಕೆಎಸ್ಎ ಭಾರತದ ಸಂಯೋಜಕರಾಗಿ ಅರಾಫತ್ ನಾಪೋಕ್ಲುರವರನ್ನು ಆಯ್ಕೆ ಮಾಡಲಾಯಿತು.