ಪೊನ್ನಂಪೇಟೆ: SIR ಕುರಿತು ಮಾಹಿತಿ ಶಿಬಿರ, ಶಾಸಕ ಪೊನ್ನಣ್ಣ ಭಾಗಿ

Jun 20, 2026 - 14:15
 0  197
ಪೊನ್ನಂಪೇಟೆ: SIR ಕುರಿತು ಮಾಹಿತಿ ಶಿಬಿರ, ಶಾಸಕ ಪೊನ್ನಣ್ಣ ಭಾಗಿ

ಗೋಣಿಕೊಪ್ಪಲು, ಜೂನ್ 20: ಚುನಾವಣಾ ಆಯೋಗದ ಎಸ್ಐಆರ್ (SIR - Special Intensive Revision) ಕುರಿತು ಮಾಹಿತಿ ಶಿಬಿರವು ಇಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಪೊನ್ನಂಪೇಟೆ ಬ್ಲಾಕ್ ವ್ಯಾಪ್ತಿಯಲ್ಲಿ ನಡೆಯಿತು.ಈ ಶಿಬಿರದಲ್ಲಿ ವಿರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರು ಭಾಗವಹಿಸಿದರು.

 ಗೋಣಿಕೊಪ್ಪಲಿನ ಫ್ರೀಡಂ ಫೈಟರ್ಸ್ ಸಭಾಂಗಣದಲ್ಲಿ ನಡೆದ ಶಿಬಿರದಲ್ಲಿ ಪೊನ್ನಂಪೇಟೆ ಬ್ಲಾಕ್ ವ್ಯಾಪ್ತಿಯ ಎಲ್ಲಾ ಬಿಎಲ್ಎ-2 ಗಳು ಹಾಗೂ ಆಹ್ವಾನಿತ ಪ್ರಮುಖರು ಭಾಗವಹಿಸಿದ್ದರು. SIR ನಡೆಯುವ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಶಿಬಿರದಲ್ಲಿ ಮಾಹಿತಿ ಒದಗಿಸಲಾಯಿತು.

ಕೆಪಿಸಿಸಿ ವತಿಯಿಂದ ಆಗಮಿಸಿದ ಪ್ರಮುಖರು SIR ಸಂದರ್ಭದಲ್ಲಿ ಅಧಿಕೃತ ಬಿಎಲ್ಎ-2 ರವರು ಕೈಗೊಳ್ಳಬೇಕಾದ ಎಚ್ಚರಿಕೆಯ ಕ್ರಮಗಳು ಹಾಗೂ ಮತದಾರರ ಭವಿಷ್ಯದ ದೃಷ್ಟಿಯಿಂದ ಕೈಗೊಳ್ಳಬೇಕಾದ ಜಾಗೃತ ಕ್ರಮಗಳ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು. ಈ ಸಭೆಯಲ್ಲಿ ಕೆಪಿಸಿಸಿ ಸದಸ್ಯ ಚಂದ್ರಮೌಳಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ಬ್ಲಾಕ್ ಅಧ್ಯಕ್ಷ ಮಿದೇರಿರ ನವೀನ್, ಎಲ್ಲಾ ವಲಯ ಅಧ್ಯಕ್ಷರುಗಳು, ಬಿಎಲ್ಎಗಳು ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0