ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಸುಂಟಿಕೊಪ್ಪ ಕನ್ನಡ ವೃತ್ತದಲ್ಲಿ ‘ಕೊಡವಲ್ಯಾಂಡ್’ ಹಕ್ಕೋತ್ತಾಯಕ್ಕಾಗಿ ಮಾನವ ಸರಪಳಿ
ಸುಂಟಿಕೊಪ್ಪ: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಸುಂಟಿಕೊಪ್ಪ ಕನ್ನಡ ವೃತ್ತದಲ್ಲಿ ‘ಕೊಡವಲ್ಯಾಂಡ್’ ಹಕ್ಕೋತ್ತಾಯಕ್ಕಾಗಿ ಮಾನವ ಸರಪಳಿ ನಿರ್ಮಿಸಿ ಭಾನುವಾರ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರನ್ನು ಉದ್ಧೇಶಿಸಿ ಮಾತನಾಡಿದ ಸಿಎನ್‌ಸಿ ಸಂಚಾಲಕ ಎನ್.ಯು.ನಾಚಪ್ಪ ಅವರು, ಕೊಡವರು ಯಾವುದೇ ಕಾರಣಕ್ಕಾಗಿ ಭೂಮಿಯನ್ನು ಮಾರಾಟ ಮಾಡಬಾರದು, ಕೊಡಗಿನ ಭೂಮಿಗಳು ನಮ್ಮ ಪೂರ್ವಿಕರು ಕೃಷಿ ಚಟುವಟಿಕೆಯನ್ನು ನಿರ್ವಹಿಸಿಕೊಂಡು ಬಂದಿದ್ದಾರೆ.
ಕೊಡಗಿನ ನೆಲ ಜಲ ಸಂಸ್ಕೃತಿಯನ್ನು ಕೊಡವರು ಉಳಿಸಲು ಪಣ ತೊಡಬೇಕು ಭೂಮಾಪಿಯಗಳ ಪರಿಸರವಾದಿಗಳಿಂದ ಕೊಡವರ ಭೂಮಿ ಪರಭಾರೆಯಾಗುತ್ತಿದೆ. ಇದನ್ನು ತಡೆಗಟ್ಟಬೇಕು ಕೊಡಗಿನ ಅರಣ್ಯ ನಾಶಕ್ಕೆ ಮೂಲನಿವಾಸಿಗಳು ಕಾರಣವಲ್ಲ ಬದಲಿಗೆ ಜಾಗತೀಕರಣದ ಹೆಸರಿನಲ್ಲಿ ದೊಡ್ಡ ಕೈಗಾರಿಕೋದ್ಯಮಿಗಳು ಕೊಡಗಿನ ಬೃಹತ್ ಕಾಫಿ ತೋಟವನ್ನು ಖರೀದಿಸಿ ರೇಸಾರ್ಟ್ ಹೋಂಸ್ಟೆಗಳನ್ನು ನಿರ್ಮಿಸಿ ಕಾಂಕ್ರೀಟಿಕರಣಗೊಳಿಸುತಿರುವುದರಿAದ ಕೊಡಗಿನಲ್ಲಿ ಭೂಕುಸಿತವಾಗಲು ಜಲಪ್ರಳಯವಾಗಲು ಕಾರಣವಾಗಿದೆ. ಇದಕ್ಕೆ ಕಡಿವಾಣ ಹಾಕಬೇಕೆಂದು ಹೇಳಿದರು. ದೇಶದ ಭದ್ರತೆಯಲ್ಲಿ ನಮ್ಮ ಜನಾಂಗದವರೇ ಅತೀ ಹೆಚ್ಚಾಗಿ ಸೇನೆಯ ಸೇವೆಯಲ್ಲಿ ಹೊಂದಿದ್ದರೂ ನಮ್ಮ ಜನಾಂಗವನ್ನು ಕಡೆಗಣಿಸಲಾಗಿದೆ. ಅಲ್ಲದೆ ಕೊಡವರ ಜನ ಸಂಖ್ಯೆ ಆಧಾರದಲ್ಲಿ ಸರಕಾರಗಳು ನೋಡುತ್ತಿರುವ ಹಿನ್ನಲೆಯಲ್ಲಿ ಇರುವ ಶಾಸಕರ ಸಂಖ್ಯಾಬಲವನ್ನು ಕಡಿತಗೊಳಿಸಲಾಗಿದೆ. ಜಿಲ್ಲೆಗೆ ದೊರೆಯಬೇಕಾದ ಮಾನ್ಯತೆಗೂ ಕುತ್ತು ಬಂದಿದೆ. ಕೊಡಗು ಪ್ರತ್ಯೇಕ ಸಂಸತ್ ಬೇಕು. ಕೊಡಗಿಗೆ ಸಂಸತ್ ಸದಸ್ಯ ಬೇಡ. ಕೊಡವರಿಗಾಗಿ ಸಂಸತ್ ನಿರ್ಮಾಣವಾಗಬೇಕು. ಜಾತಿ ಗಣತಿ ಸಂದರ್ಭದಲ್ಲಿ ಕೊಡವ ಜನಾಂಗದವರು ಕೊಡವರೆಂದು ಹೆಸರು ಸೆರ್ಪಡೆಗೊಳಿಸುವ ಮೂಲಕ ಜನಸಂಖ್ಯೆಯ ಬಲವನ್ನು ಹೆಚ್ಚಿಸುವಂತೆ ಕರೆ ನೀಡಿದರು. ಕೊಡವ ಜನಾಂಗದವರನ್ನು ಬುಡಕಟ್ಟು ಮೀಸಲಾತಿಗೆ ಸೇರ್ಪಡೆಗೊಳಿಸಬೇಕೆಂದು ಹೈಕೋರ್ಟ್ನಲ್ಲಿ ದಾವೆ ದಾಖಲಿಸಿದೆ ಎಂದೂ ಅವರು ಉಲ್ಲೇಖಿಸಿದರು. ಈ ಸಂದರ್ಭದಲ್ಲಿ ಎಂ.ಎ.ವಸಂತ ಅವರು ಪ್ರಾಸ್ತಾವಿಕ ನುಡಿಯಾಡಿದರು. ಸಿಎನ್‌ಸಿಯ ಸದಸ್ಯರಾದ ಪಿ.ಕೆ.ಮುತ್ತಣ್ಣ, ಎಂ.ಎ.ಉತ್ತಪ್ಪ,ಕೆ.ಜಿ.ಮುತ್ತಣ್ಣ,ಪಿ.ಎನ್.ಬೋಪಣ್ಣ, ಡಿ.ಸಿ.ದೇವಯ್ಯ, ಪುಲ್ಲೇರ ಕಾಳಪ್ಪ ಹಾಗೂ ಪಿ.ಎಂ. ರಂಜಿತ್ ಕಾರ್ಯಪ್ಪ, ವಿವಿಧೆಡೆಗಳಿಂದ ಕೊಡವ ಜನಾಂಗದವರು ಆಗಮಿಸಿದರು. ಕನ್ನಡ ವೃತ್ತದಲ್ಲಿ ಸಿಎನ್‌ಸಿಯ ಪದಾಧಿಕಾರಿಗಳು ಮಾನವ ಸರಪಳಿ ನಿರ್ಮಿಸಿ ಘೋಷಣೆಗಳನ್ನು ಕೂಗಿದರು. ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮೋಹನ್‌ರಾಜ್ ಹಾಗೂ ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ವಹಿಸಿದರು.