ಎಮ್ಮೆಮಾಡು ಉರೂಸ್ ಪ್ರಯುಕ್ತ 'ಕೊಡಿ ತೂಕಲ್' ಕಾರ್ಯಕ್ರಮ

ಎಮ್ಮೆಮಾಡು  ಉರೂಸ್ ಪ್ರಯುಕ್ತ 'ಕೊಡಿ ತೂಕಲ್' ಕಾರ್ಯಕ್ರಮ

ನಾಪೋಕ್ಲು: ಎಮ್ಮೆಮಾಡು ಉರೂಸ್ ಪ್ರಯುಕ್ತ 'ಕೊಡಿ ತೂಕಲ್' ಕಾರ್ಯಕ್ರಮ ಎಮ್ಮೆಮಾಡು ದರ್ಗದಲ್ಲಿ ಶ್ರದ್ಧಾ ಭಕ್ತಿಯಿಂದ ಚಾಲನೆ ನೀಡಲಾಯಿತು .

ಕಾರ್ಯಕ್ರಮದ ಅಂಗವಾಗಿ ಜಮಾಯತ್ ಪದಾಧಿಕಾರಿಗಳ ಹಾಗೂ ಗ್ರಾಮಸ್ಥರು ಅಲ್ಲಿಯ ಮಸೀದಿ ಆವರಣದಿಂದ ದಫ್ಫ್ ಪ್ರದರ್ಶನದೊಂದಿಗೆ ಸೂಫೀ ಶಹೀದ್ , ಸಯ್ಯಿದ್ ಹಸ್ಸನ್ ಸಖಾಫ್ ಹಾಗೂ ಇತರೆ ದರ್ಗಾಗಳಿಗೆ ತೆರಳಿ ಜಮಾಅತ್ತ್ ಅಧ್ಯಕ್ಷ ಹುಸೈನ್ ಸಖಾಫಿ ರವರ ನೇತೃತ್ವದಲ್ಲಿ ಚಾದರ ಹೊದಿಸಿ ಆ ಬಳಿಕ ಉರೂಸ್ ಸಮಾರಂಭಗಳು ಯಾವುದೇ ವಿಘ್ನಗಳಿಲ್ಲದೆ ಸುಶೂತ್ರವಾಗಿ ಜರುಗಲಿ ಎಂದು ದರ್ಗದಲ್ಲಿ ಸಾಮೂಹಿಕ ವಿಶೇಷ ಪ್ರಾರ್ಥನೆಯನ್ನು ಮಾಡಲಾಯಿತು .

 ಪ್ರತಿ ವರ್ಷದಂತೆ ಈ ವರ್ಷವೂ ಪಾರಂಪರಿಕವಾಗಿ ಆಚರಿಸಿಕೊಂಡು ಬಂದ ಈ 'ಕೊಡಿ ತೂಕಲ್ ' ಕಾರ್ಯಮವು ಉರೂಸ್ ಕಾರ್ಯಕ್ರಮದ ಸಿದ್ಧತೆಗೆ ಸಂಬಂಧಿಸಿದ (ಬಾವುಟ) ಧ್ವಜಗಳನ್ನು ಪ್ರಥಮವಾಗಿ ಸಾಂಕೇತಿಕವಾಗಿ ದರ್ಗಾದಲ್ಲಿ ಕಟ್ಟಿ ಬಲಿಕ ಊರಿನಲ್ಲಿ ಕಟ್ಟಿ ಅಲಂಕರಿಸುವ ಪದ್ಧತಿಯಾಗಿದೆ. ತಾಜುಲ್ ಇಸ್ಲಾಂ ಮುಸ್ಲಿಂ ಜಮಾ ಅತ್ ಅಧ್ಯಕ್ಷರಾದ ಹುಸೈನ್ ಸಖಾಫಿ , ಪ್ರಧಾನ ಕಾರ್ಯದರ್ಶಿ ಸಯ್ಯಿದ್ ಝಕರಿಯ ಸಅದಿ ಅಲ್ ಐದರೂಸಿ ಮತ್ತು ಸೈಯದ್ ಸಿಹಬುದ್ದೀನ್ ತಂಗಲ್ ಎಮ್ಮೆಮಾಡು ರವರು ಮಾತನಾಡಿ ಸಾಮರಸ್ಯದ ಕೇಂದ್ರವಾದ ಎಮ್ಮೆಮಾಡು ಉರೂಸ್ ಕಾರ್ಯಕ್ರಮಕ್ಕೆ ಜಾತಿ ಧರ್ಮ ಭೇದವಿಲ್ಲದೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಮನವಿ ಮಾಡಿಕೊಂಡರು .

ಈ ಸಂದರ್ಭ ಕಾರ್ಯಕ್ರಮದಲ್ಲಿ ತಾಜುಲ್ ಇಸ್ಲಾಂ ಮುಸ್ಲಿಂ ಜಮಾ ಅತ್ ಕೋಶಾಧಿಕಾರಿ ಅಬ್ದುಲ್ ಮಜೀದ್ ಕೆ ಎಸ್ . ಮುದರ್ರಿಸ್ ಎ ಪಿ ಹಂಸ ಸಖಾಫಿ , ಖತೀಬ್ ರಾಝಿಕ್ ಫೈಝಿ , ತಾಜುಲ್ ಇಸ್ಲಾಂ ಮುಸ್ಲಿಂ ಜಮಾಯತ್ ನ ಪದಾಧಿಕಾರಿ ಸದಸ್ಯರು , ಊರಿನ ಸೈಯ್ಯದರುಗಳು ,ಶಹೀದಿಯ ಅನಾಥಾಲಯದ ಪದಾಧಿಕಾರಿಗಳು, ಗ್ರಾಮಸ್ಥರು ಭಾಗವಹಿಸಿದರು.

ವರದಿ:ದುಗ್ಗಲ ಸದಾನಂದ