ಕುಂಜಿಲ‌ ಪೈನರಿ ಮಖಾಂ ಉರೂಸ್;ಸರ್ವ ಧರ್ಮದ ಸಹಬಾಳ್ವೆ ಎಂಬುದು ನಾಡಿನ ಒಳಿತಿಗೆ ಮುಖ್ಯ:ಶಾಸಕ ಎಎಸ್ ಪೊನ್ನಣ್ಣ

ಕುಂಜಿಲ‌ ಪೈನರಿ ಮಖಾಂ ಉರೂಸ್;ಸರ್ವ ಧರ್ಮದ ಸಹಬಾಳ್ವೆ ಎಂಬುದು ನಾಡಿನ ಒಳಿತಿಗೆ ಮುಖ್ಯ:ಶಾಸಕ ಎಎಸ್ ಪೊನ್ನಣ್ಣ

ವಿರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಮಡಿಕೇರಿ ತಾಲೂಕು ಕಕ್ಕಬ್ಬೆ ಕುಂಜಿಲ ಗ್ರಾಮಕ್ಕೆ ಭೇಟಿ ನೀಡಿದರು. ಈ ಭಾಗದಲ್ಲಿ ಪ್ರತಿವರ್ಷ ನಡೆಯುವ ಪ್ರಸಿದ್ಧ ಕುಂಜಿಲ ಪೈನ ಮಖಾಂ ಉರುಸ್ ಕಾರ್ಯಕ್ರಮದಲ್ಲಿ ಶಾಸಕರು ಭಾಗವಹಿಸಿ ಮಾತನಾಡಿದರು.

 ನಾಡಿಗೆ ಸುಖ, ಶಾಂತಿ ಹಾಗೂ ಸೌಹಾರ್ದತೆಯ ಸಂದೇಶ ಸಾರುವ ಕಾರ್ಯಕ್ರಮವು ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ಹಾರೈಸಿದರು. ಸರ್ವ ಧರ್ಮದ ಸಹಬಾಳ್ವೆ ಎಂಬುದು ನಾಡಿನ ಒಳಿತಿಗೆ ಅತಿ ಮುಖ್ಯವಾದದ್ದು. ಅಂತಹ ಸಂದೇಶವನ್ನು ಸಾರುವ ಉರುಸ್ ಕಾರ್ಯಕ್ರಮ ಎಲ್ಲರಿಗೂ ಶುಭವನ್ನುಂಟು ಮಾಡಲಿ ಎಂದು ಹಾರೈಸಿದರು.

 ಈ ಸಂದರ್ಭದಲ್ಲಿ ಮಸೀದಿಯ ಅಧ್ಯಕ್ಷ ಸೌಕಾತ್ ಅಲಿ, ನಾಪೋಕ್ಲು ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್, ಕೆ ಪಿ ಸಿ ಸಿ ಸದಸ್ಯರಾದ ಯಾಕೂಬ್ ,ಜಿಲ್ಲಾ ಉಪಾಧ್ಯಕ್ಷರು ಅಬ್ದುಲ್ ರೆಹಮಾನ್, ಮೊಹಮ್ಮದ್ ಹಾಜಿ,ಕೆಡಿಪಿ ಸದಸ್ಯರು ಬಾಚಮಾಂಡ ಲವ ಚಿಣ್ಣಪ್ಪ, ಕಕ್ಕಬೆ ಪಂಚಾಯಿತಿ ಮಾಜಿ ಅಧ್ಯಕ್ಷರು ಕಲಿಯಂಡ ಸಂಪನ್ ಅಯ್ಯಪ್ಪ,ಸಂತು ಸುಬ್ರಮಣಿ,ರಝಕ್ ಕುಂಡಂಡ, ಹಾಗೂ ಪ್ರಮುಖರು ಉಪಸ್ಥಿತರಿದ್ದರು.