ಕುಶಾಲನಗರ : ಮಾಜಿ ಸಿಎಂ ದಿ.ಆರ್.ಗುಂಡೂರಾವ್ ಪುತ್ಥಳಿ ನಿರ್ಮಾಣಕ್ಕೆ ಶಾಸಕ ಮಂತರ್ ಗೌಡ ಶಂಕುಸ್ಥಾಪನೆ
ಕುಶಾಲನಗರ : ಇಲ್ಲಿನ ಪುರಸಭೆ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಆರ್.ಗುಂಡೂರಾವ್ ಅವರ ಪುತ್ಥಳಿ ನಿರ್ಮಾಣಕ್ಕೆ ಭಾನುವಾರ ಶಾಸಕ ಡಾ.ಮಂತರ್ ಗೌಡ ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಶಾಸಕರು, ರಾಜ್ಯಕಂಡ ಮಹಾನ್ ನಾಯಕ ಗುಂಡೂರಾಯರ ಪುತ್ಥಳಿಯನ್ನು ನಿರ್ಮಿಸುವ ಭಾಗ್ಯ ನಮಗೆ ದೊರೆಯಿದೆ.ಸುಮಾರು ಹತ್ತು ಟನ್ ತೂಕವುಳ್ಳ 6.5 ಅಡಿ ಎತ್ತರ ಪ್ರತಿಮೆ ಸ್ಥಾಪಿಸಲು ಉದ್ದೇಶಿಸಲಾಗಿದೆ. ಅದಕ್ಕೆ ಬೇಕಾದ ತಳಪಾಯ ವೇದಿಕೆಯನ್ನು ರೂ.17.5 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.ಇದರ ಮೇಲೆ ಕಂಚಿನ ಪ್ರತಿಮೆ ಸ್ಥಾಪಿಸಲಾಗುತ್ತದೆ.ಅಂದಾಜು ರೂ.50 ಲಕ್ಷ ಪ್ರತಿಮೆ ನಿರ್ಮಾಣಕ್ಕೆ ಬೇಕಾಗಲಿದ್ದು, ಪಕ್ಷಾತೀತ ಹಾಗೂ ರಾಜಕೀಯ ರಹಿತವಾದ ಕಾರ್ಯವಾಗಿದೆ. ಪಟ್ಟಣದ ಎಲ್ಲಾ ಸಂಘಸಂಸ್ಥೆಗಳು, ದಾನಿಗಳು ಪ್ರತಿಮೆ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಅರ್ಬಸ್ ಅಹಮದ್ ಮಾತನಾಡಿ,ರೂ.17.5 ಲಕ್ಷ ವೆಚ್ಚದಲ್ಲಿ 6.5 ಅಡಿ ಎತ್ತರ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ಅಂದಾಜಿಸಲಾಗಿದ್ದು, ತಳಪಾಯ ಹಾಗೂ ಪ್ರತಿಮೆ ನಿರ್ಮಿಸಲು ವೇದಿಕೆ ಸಿದ್ಧಪಡಿಸಲಾಗುತ್ತದೆ.ಇದರ ಮೇಲೆ ಎಂಟು ಟನ್ ತೂಕದ ಹಾಲೋ ಕಂಚಿನ ಪ್ರತಿಮೆ ಸ್ಥಾಪಿಸಬಹುದು ಎಂದು ತಾಂತ್ರಿಕ ಮಾಹಿತಿ ನೀಡಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ವಕೀಲರ ಸಂಘದ ಅಧ್ಯಕ್ಷ ಆರ್.ಕೆ.ನಾಗೇಂದ್ರ ಬಾಬು,ಹಿರಿಯ ನಾಗರಿಕರಾದ ಕೆ.ಎನ್.ವಸಂತಕುಮಾರ್,ಮೈಸೂರಿನ ಕೃಷ್ಣಮೂರ್ತಿ ಮಾತನಾಡಿದರು.
ಈ ಸಂದರ್ಭ ನಿವೃತ್ತ ಮುಖ್ಯ ಶಿಕ್ಷಕ ಎಂ.ಎಚ್.ನಜೀರ್ ಅಹ್ಮದ್ ಮಾಸ್ಟರ್,ಗುಂಡೂರಾವ್ ಒಡನಾಡಿ ಫಜಲುಲ್ಲಾ ಖಾನ್, ಕೂಡಾ ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡೂರಾವ್, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್,ಪುರಸಭೆ ಮುಖ್ಯಾಧಿಕಾರಿ ಟಿ.ಎಸ್.ಗಿರೀಶ್,ಆರೋಗ್ಯ ನಿರೀಕ್ಷಕ ಉದಯಕುಮಾರ್, ಕಂದಾಯ ಅಧಿಕಾರಿ ರಾಮು, ಪುರಸಭೆ ಮಾಜಿ ಸದಸ್ಯರು, ಕಾಂಗ್ರೆಸ್ ಪಕ್ಷದ ಹಾಗೂ ವಿವಿಧ ಸಂಘಸಂಸ್ಥೆಗಳ ಮುಖಂಡರು ಪಾಲ್ಗೊಂಡಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
