ಕುಶಾಲನಗರ: ಭಜನೆ ಮತ್ತು ವನಿತಾ ಸಂಗಮ

ಕುಶಾಲನಗರ: ಭಜನೆ ಮತ್ತು ವನಿತಾ ಸಂಗಮ

ಕುಶಾಲನಗರ: ವಿವೇಕ ಜಾಗೃತ ಬಳಗ, ಡಿವೈನ್ ಪಾರ್ಕ್ ಟ್ರಸ್ಟ್ (ರಿ )ಸಾಲಿಗ್ರಾಮ ಇದರ ಅಂಗ ಸಂಸ್ಥೆಯ ವತಿಯಿಂದ ಭಜನೆ ಮತ್ತು ವನಿತಾ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಆಗಸ್ಟ್ 23 ರಂದು ಶನಿವಾರ ಕುಶಾಲನಗರದ ಗೌಡ ಸಮಾಜದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10.30ರಿಂದ 11ಗಂಟೆವರೆಗೆ ಭಜನಾ ಕಾರ್ಯಕ್ರಮ, 11.00 ಗಂಟೆಯಿಂದ 12.30ರ ವರೆಗೆ ವನಿತಾ ಸಂಗಮ ಕಾರ್ಯಕ್ರಮ ನಡೆಯಲಿದೆ. ಉಡುಪಿ ಜಿಲ್ಲೆಯ ಸಾಲಿಗ್ರಾಮದ ಡಿವೈನ್ ಪಾರ್ಕ್ ನ ದಕ್ಷ ಸೇವಕಿ ದಿವ್ಯ ತೇಜ್ ಕುಮಾರ್ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಕುಶಾಲನಗರ ವಿವೇಕ ಜಾಗೃತ ಬಳಗ ಕೋರಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 9945933439,9449998601,6366307433.