ಕುಶಾಲನಗರ: ಈದ್ ಮಿಲಾದ್ ಹಾಗೂ ಗೌರಿ ಗಣೇಶ ಹಬ್ಬ:ಶಾಂತಿ ಸಭೆ ನಡೆಸಿದ ಪೊಲೀಸರು

ಕುಶಾಲನಗರ: ಈದ್ ಮಿಲಾದ್ ಹಾಗೂ ಗೌರಿ ಗಣೇಶ ಹಬ್ಬ:ಶಾಂತಿ ಸಭೆ ನಡೆಸಿದ ಪೊಲೀಸರು

ಕುಶಾಲನಗರ: ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ ನಡೆಯಲಿರುವ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಸೌಹಾರ್ದಯುತವಾಗಿ‌ ನಡೆಸುವ ದೃಷ್ಟಿಯಿಂದ ಪೊಲೀಸ್ ಇಲಾಖೆ ವತಿಯಿಂದ ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ಶಾಂತಿ ಸಭೆಯಲ್ಲಿ‌ ನಡೆಸಲಾಯಿತು.

 ‌ ಸೋಮವಾರಪೇಟೆ ವಿಭಾಗದ ಡಿ.ವೈ.ಎಸ್.ಪಿ ಪಿ.ಚಂದ್ರಶೇಖರ್ ಮಾತನಾಡಿ, ಕುಶಾಲನಗರ ತಾಲ್ಲೂಕು‌ ವ್ಯಾಪ್ತಿಯಲ್ಲಿ ೧೫೦ ಕ್ಕೂ ಹೆಚ್ಚು ಕಡೆಗಳಲ್ಲಿ ಗಣೇಶ ವಿಸರ್ಜನೆ ಮಾಡಲಾಗುತ್ತದೆ. ಆದ್ದರಿಂದ ಎಲ್ಲರೂ ಪೊಲೀಸ್ ಇಲಾಖೆಯಿಂದ, ಆಯಾ ಸ್ಥಳೀಯ ಆಡಳಿತ ಸಂಸ್ಥೆ, ಅಗ್ನಿ ಶಾಮಕ ದಳ, ಚೆಸ್ಕಾಂ ಹಾಗೂ ಇನ್ನಿತರ ಇಲಾಖೆಗಳಿಂದ ಅನುಮತಿ ಪಡೆಯಬೇಕು. ಎಲ್ಲಾ ಗಣೇಶ ಪ್ರತಿಷ್ಠಾಪನಾ ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು. ಮಸೀದಿ, ಮಂದಿರ, ಚರ್ಚ್, ಜನಸಂದಣಿಯಿರುವ ಸ್ಥಳಗಳಿಂದ ಐವರು ಮೀಟರ್ ಒಳಗೆ ಪಟಾಕಿ, ಸಿಡಿಮದ್ದುಗಳನ್ನು ಸಿಡಿಸಬಾರದು. ಹೆಚ್ಚು ಡೆಸಿಬಲ್ ಸೌಂಡ್ ಸಿಸ್ಟಂ ಬಳಸಿ ಸಾರ್ವಜನಿಕರಿಗೆ ಸಮಸ್ಯೆ ನೀಡಬಾರದು.

 ಗೌರಿ ಗಣೇಶದ ಹಬ್ಬದ ಸಂದರ್ಭ ಯಾವುದೇ ರೀತಿಯ ಅನಾಹುತಗಳು ಅವಘಡಗಳು ಸಂಭವಿಸದಂತೆ ಗಮನಹರಿಸಬೇಕು. ಯಾವುದೇ ರೀತಿಯಾದ ತೊಂದರೆಯಾಗದ ರೀತಿಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ, ನಿಯಮಾನುಸಾರ ಗಣೇಶ ವಿಸರ್ಜನೆ ಮಾಡಬೇಕು ಎಂದರು. ನಂತರ ಮಾತನಾಡಿದ ವೃತ್ತ ನಿರೀಕ್ಷಕರು ದಿನೇಶ್ ಕುಮಾರ್, ಗಣೇಶ ವಿಸರ್ಜನೆಯ ಸಂದರ್ಭ ಪಾಲಿಸಬೇಕಾದ ನಿಯಮಗಳನ್ನು ವಿವರಿಸಿದರು. ನಂತರ ಸಾರ್ವಜನಿಕರ ಪ್ರಶ್ನೆಗಳಿಗೆ ಪೊಲೀಸ್ ಅಧಿಕಾರಿಗಳು ಉತ್ತರಿಸಿದರು. ಈ ಸಂದರ್ಭ ಕುಶಾಲನಗರ ಪಟ್ಟಣ ಪೊಲೀಸ್ ಠಾಣಾಧಿಕಾರಿ ಗಣೇಶ್, ಶುಂಠಿಕೊಪ್ಪ ಠಾಣಾಧಿಕಾರಿ ಮೋಹನ್, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ರಾಮಚಂದ್ರ ಹಾಗೂ ಸ್ವಾಮಿ ಇದ್ದರು.