ಕುಶಾಲನಗರ; ಕಾವೇರಿ ನದಿಯಲ್ಲಿ ಮುಳುಗಡೆಯಾಗಿದ್ದ ಮತ್ತೊಬ್ಬನ ಮೃತದೇಹ ಪತ್ತೆ

Jun 13, 2026 - 19:57
Jun 13, 2026 - 19:59
 0  640
ಕುಶಾಲನಗರ; ಕಾವೇರಿ ನದಿಯಲ್ಲಿ ಮುಳುಗಡೆಯಾಗಿದ್ದ ಮತ್ತೊಬ್ಬನ  ಮೃತದೇಹ ಪತ್ತೆ

ಮಡಿಕೇರಿ;ಮೊನ್ನೆ ದಿನ ಕುಶಾಲನಗರದ ರಸೂಲ್ ಲೇಔಟ್ ಬಳಿ ಕಾವೇರಿ ನದಿಯಲ್ಲಿ ಸ್ನಾನಕ್ಕೆ ತೆರಳಿ ಜಲ ಸಮಾಧಿ ಆಗಿದ್ದ ನಾಗಾಲ್ಯಾಂಡ್ ಮೂಲದ ಯುವಕನ ಮೃತ ದೇಹ ಇಂದು ಪತ್ತೆ ಆಗಿದೆ.

ಕುಶಾಲನಗರ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಮತ್ತು ಮುಳುಗು ತಜ್ಞರು ಇಂದು ಕೂಡ ಕಾರ್ಯಾಚರಣೆಯನ್ನು ಮುಂದುವರೆಸಿ ಮುತ್ತಿನ ಮುಳ್ಳುಸೋಗೆ ಬಳಿ ಹರಿಯುತಿರುವ ಕಾವೇರಿ ನದಿಯಲ್ಲಿ ಗಿಡಗಳ ನಡುವೆ ಸಿಲುಕಿಕೊಂಡಿದ್ದ ಯುವಕನ ಮೃತ ದೇಹವನ್ನು ಪತ್ತೆಹಚ್ಚುವಲ್ಲಿ ಯಶಸ್ವಿ ಯಾಗಿದ್ದಾರೆ.

ಕುಶಾಲನಗರದ ಹೋಟೆಲ್ ಒಂದರಲ್ಲಿ ಕೆಲಸ‌ ನಿರ್ವಹಿಸುತ್ತಿದ್ದ ನಾಗಾಲಾಂಡ್ ರಾಜ್ಯದ ಲಾಂಗ್ ಟಕ್ ಕೊನ್ಯಕ್ ಮತ್ತು ಹಾಂಗ್ ಕಪ್ ಕೊನ್ಯಕ್ ಎಂಬ ಇಬ್ಬರು ಯುವಕರು ಹಾಗೂ ಓರ್ವ ಯುವತಿ ಮೊನ್ನೆ ಸಂಜೆ ಕುಶಾಲನಗರ ರಸೂಲ್ ಲೇಔಟ್ ಬಳಿ ನದಿಯತ್ತ ತೆರಳಿದ್ದರು. ಇವರ ಪೈಕಿ ಇಬ್ಬರು ಯುವಕರು ನದಿಗಿಳಿದಿದ್ದಾರೆ. ಈ ಸಂದರ್ಭ ಆಳವಾದ ಗುಂಡಿಯಲ್ಲಿ ಮುಳುಗಿ ಯುವಕರು ಜಲ ಸಮಾಧಿ ಆಗಿದ್ದರು. ಕುಶಾಲನಗರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 3
Wow Wow 0