ಕುಶಾಲನಗರ:ಪ್ರಚೋದನಕಾರಿ ಭಾಷಣ ಇಬ್ಬರ ಮೇಲೆ ಪ್ರಕರಣ ದಾಖಲು

ಕುಶಾಲನಗರ:ಪ್ರಚೋದನಕಾರಿ ಭಾಷಣ ಇಬ್ಬರ ಮೇಲೆ ಪ್ರಕರಣ ದಾಖಲು

ಕುಶಾಲನಗರ: ಕುಶಾಲನಗರ ಕಾರ್ ಸ್ಟ್ಯಾಂಡ್‌ನಲ್ಲಿ ಜೂನ್ 30ರಂದು ನಡೆದ ಮತಾಂತರ ವಿರುದ್ಧ ಜನಜಾಗೃತಿ ಜಾಥಾ,ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿ ಮತಾಂತರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಇಬ್ಬರ ವಿರುದ್ಧ ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

ಸತೀಶ್ ದಾವಣಗೆರೆ, ಕರ್ನಾಟಕ ಹಿಂದೂ ಪ್ರಾಂತ್ಯ ಸಹ ಸಂಚಾಲಕ, ಸೋಮವಾರಪೇಟೆ ಅಮೃತ್ ರಾಜ್ ಅವರ ಮೇಲೆಜಬಿಉಲ್ಲಾ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಾಗಿದೆ.

ಪ್ರಕರಣದ ವಿವರ: ಜೂನ್ 30, 2026ರ ಮಧ್ಯಾಹ್ನ 12:00 ರಿಂದ 12:30ರ ನಡುವೆ ಕುಶಾಲನಗರ ಕಾರ್ ಸ್ಟ್ಯಾಂಡ್‌ನಲ್ಲಿ ಹಿಂದೂ ಸುರಕ್ಷಾ ಸಮಿತಿ ಸಭೆ ನಡೆದಿತ್ತು.

ಈ ವೇಳೆ ಕರ್ನಾಟಕ ಹಿಂದೂ ಪ್ರಾಂತ್ಯ ಸಹ ಸಂಚಾಲಕ ಸತೀಶ್ ದಾವಣಗೆರೆ ಮಾತನಾಡಿ, "ಒಂದು ಹಿಂದೂ ಹುಡುಗಿಯನ್ನು ಮತಾಂತರ ಮಾಡಿದರೆ, ನಮ್ಮ ಹಿಂದೂ ಹುಡುಗರು 10 ಜನ ಮುಸ್ಲಿಂ ಹುಡುಗಿಯರನ್ನು ಮನೆಗೆ ಕರೆದುಕೊಂಡು ಬರಬೇಕು. ಕರೆದುಕೊಂಡು ಬಂದರೆ ಅವರ ವಿವಾಹದ ಖರ್ಚನ್ನು ಸಂಘಟನೆಯೇ ನಾವೇ ವಹಿಸಿಕೊಳ್ಳುತ್ತೇವೆ. 3 ಮಕ್ಕಳನ್ನು ಮಾಡಿಕೊಂಡರೆ ಅದರಲ್ಲಿ ಒಂದು ಮಗುವಿಗೆ ವಿದ್ಯಾಭ್ಯಾಸದ ಖರ್ಚನ್ನು ನಾವೇ ಮಾಡುತ್ತೇವೆ" ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

"ಸಮುದಾಯದ ಪ್ರಮುಖರೊಂದಿಗೆ ಚರ್ಚಿಸಿ ದೂರು ನೀಡಲು ತಡವಾಗಿದೆ" ಎಂದು ದೂರುದಾರರು ತಿಳಿಸಿದ್ದಾರೆ: ಭಾರತೀಯ ನ್ಯಾಯ ಸಂಹಿತೆ (BNS) 2023, ಕಲಂ 192 - ಗಲಭೆಗೆ ಪ್ರಚೋದನೆ, 299 - ಧಾರ್ಮಿಕ ಭಾವನೆಗೆ ಧಕ್ಕೆ, 3(5) - ಅಪರಾಧಕ್ಕೆ ಪ್ರಚೋದನೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.