ಕುಶಾಲನಗರ: ಅಪರಿಚಿತ ವಾಹನ ಡಿಕ್ಕಿಯಾಗಿ ಜೀವನ್ಮರಣ ಸ್ಥಿತಿಯಲ್ಲಿದ್ದ ಕರುವಿನ ಜೀವ ಉಳಿಸಿ ಮಾನವೀಯತೆ ಮೆರೆದ ನಾಗರಿಕರು

Dec 23, 2025 - 13:34
 0  521
ಕುಶಾಲನಗರ: ಅಪರಿಚಿತ ವಾಹನ ಡಿಕ್ಕಿಯಾಗಿ ಜೀವನ್ಮರಣ ಸ್ಥಿತಿಯಲ್ಲಿದ್ದ ಕರುವಿನ ಜೀವ ಉಳಿಸಿ ಮಾನವೀಯತೆ ಮೆರೆದ ನಾಗರಿಕರು

ಕುಶಾಲನಗರ, ಡಿ 23: ಕುಶಾಲನಗರದ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮುಂಭಾಗ ಸೋಮವಾರ ರಾತ್ರಿ ಅಪರಿಚಿತ ವಾಹನ ಡಿಕ್ಕಿಯಾಗಿ ಕರುವೊಂದು ಗಂಭೀರವಾಗಿ ಗಾಯಗೊಂಡಿತ್ತು.

 ಬೆಳಗ್ಗೆ ಕರುವನ್ನು ಗಮನಿಸಿದ ಸ್ಥಳೀಯರು, ಕೊಡಗು ಅಭಿವೃದ್ಧಿ ಸಮಿತಿಯ ದಾವುದ್ ಮತ್ತಿತರರ ಪ್ರಮುಖರು ಪೌರ ಕಾರ್ಮಿಕರು, ಸ್ವಂತ ವಾಹನದಲ್ಲಿ ಪಶು ವೈದ್ಯಕೀಯ ಕೇಂದ್ರಕ್ಕೆ ಸಾಗಿಸಿ ಚಿಕಿತ್ಸೆ ಕೊಡಿಸಿ ಜೀವ ಉಳಿಸಿ ಮಾನವೀಯತೆ ಮೆರೆದಿದ್ದಾರೆ.

ಇಂತಹ ಪ್ರಕರಣ ಸಂದರ್ಭ ಮೂಕಪ್ರಾಣಿಗಳ ಚಿಕಿತ್ಸೆಗೆ ಪಶು ವೈದ್ಯರ ಸಹಕಾರ ಅತಿ ಮುಖ್ಯ. ಸಕಾಲದಲ್ಲಿ ಚಿಕಿತ್ಸೆ ದೊರೆತರೆ ಜೀವ ಉಳಿಸಬಹುದು. ಇದಕ್ಕೆ ಸೂಕ್ತ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸುವಂತೆ ಕೊಡಗು ಅಭಿವೃದ್ಧಿ ಸಮಿತಿ ಶಾಸಕರನ್ನು ಆಗ್ರಹಿಸಿದೆ.

What's Your Reaction?

Like Like 3
Dislike Dislike 0
Love Love 0
Funny Funny 1
Angry Angry 0
Sad Sad 1
Wow Wow 1