ಕುಶಾಲನಗರ : ರೂ.5.5 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಮಂತರ್ ಗೌಡ ಚಾಲನೆ

May 9, 2026 - 09:00
 0  250
ಕುಶಾಲನಗರ : ರೂ.5.5 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಮಂತರ್ ಗೌಡ ಚಾಲನೆ

ಕುಶಾಲನಗರ : 2025-26 ರ ಸಾಲಿನ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಬಿಡುಗಡೆಯಾದ ರೂ.5.5 ಕೋಟಿ ಅನುದಾನದಲ್ಲಿ ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ಶಾಸಕ ಡಾ. ಮಂತರ್ ಗೌಡ ಭೂಮಿ ಪೂಜೆ ನೆರವೇರಿಸಿದರು.

 ಗೊಂದಿಬಸವನಹಳ್ಳಿ ಗ್ರಾಮದಲ್ಲಿ ರೂ.5 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಶ್ರೀ ದೊಡ್ಡಮ್ಮ ದೇವಿ ದೇವಾಲಯದ ಕಮಾನು ಅನ್ನು ಉದ್ಘಾಟಿಸಿದರು.ಈ ಸಂದರ್ಭ ಮಾತನಾಡಿದ ಶಾಸಕರು ಗ್ರಾಮಸ್ಥರ ಮನವಿ ಮೇರೆಗೆ ರೂ. 5 ಲಕ್ಷ ಶಾಸಕರ ನಿಧಿಯಿಂದ ಕಮಾನು ನಿರ್ಮಾಣಕ್ಕೆ ಒದಗಿಸಲಾಗಿತ್ತು.ಈ ಕಾಮಗಾರಿ ಪೂರ್ಣಗೊಂಡಿದೆ.ಈ ದೊಡ್ಡಮ್ಮ ತಾಯಿ ಕ್ಷೇತ್ರ ಪವಿತ್ರ ಕ್ಷೇತ್ರವಾಗಿದೆ.ಈ ಹಿನ್ನೆಲೆ ರಸ್ತೆ ಹಾಗೂ ಕೆರೆ ಅಭಿವೃದ್ಧಿಗೂ ಚಾಲನೆ ನೀಡಲಾಗಿದೆ ಎಂದರು.

ಮುಖ್ಯಮಂತ್ರಿಗಳ ವಿಶೇಷ ಪ್ಯಾಕೇಜ್ ನಲ್ಲಿ ಕುಶಾಲನಗರ ಪುರಸಭೆ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗಾಗಿ ರೂ. 5. 5 ಕೋಟಿ ಅನುದಾನ ಒದಗಿಸಲಾಗಿದೆ. ರಸ್ತೆಗಳ ಅಭಿವೃದ್ಧಿಯಾದರೆ ನಗರ ಅಭಿವೃದ್ಧಿ ಆಗುತ್ತದೆ ಎಂದರು.

 ಪುರಸಭೆ ವ್ಯಾಪ್ತಿಯ ಸೋಮೇಶ್ವರ ದೇವಸ್ಥಾನದಿಂದ ಗುಂಡೂರಾವ್ ಬಡಾವಣೆಯ ಮಂಜುನಾಥ್ ಗುಂಡೂರಾವ್ ಅವರ ಮನೆತನಕ ರಸ್ತೆ ಅಭಿವೃದ್ಧಿ, ಆಸ್ಪತ್ರೆ ಸರ್ಕಲ್ ಬಳಿ ಬಿಜಿಎಸ್ ವೃತ್ತದಿಂದ ಐಬಿವರೆಗೆ ಹಾಗೂ ಹಳೆ ಮಾರುಕಟ್ಟೆ ರಸ್ತೆಯಲ್ಲಿಯ ನೌಶಾದ್ ಆಟೋ ಪಾರ್ಟ್ಸ್ ಕಲಿಮುಲ್ಲ ಅವರ ಮನೆತನಕ ರಸ್ತೆ ಮತ್ತು ಎರಡು ಬದಿಯ ಚರಂಡಿ ನಿರ್ಮಾಣಕ್ಕೆ ಶಾಸಕರು ಭೂಮಿಪೂಜೆ ನೆರವೇರಿಸಿದರು.ಆದರ್ಶ ದ್ರಾವಿಡ ಕಾಲೋನಿಯ ಸಮುದಾಯ ಭವನಕ್ಕೆ ತಡೆಗೋಡೆ ನಿರ್ಮಾಣ, ದಂಡಿನಪೇಟೆಯಲ್ಲಿರುವ ಅಜೀಜ್ ಅವರ ಮನೆಯಿಂದ ಮುನ್ನ ಅವರ ಮನೆತನಕ ರಸ್ತೆ ನಿರ್ಮಾಣ ಮತ್ತು ನಝೀಮಾ ಅವರ ಮನೆಯಿಂದ ಮೆಹರುನೀಸ ಅವರ ಮನೆಯ ತನಕ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಸ್ಥಳೀಯ ನಿವಾಸಿಗಳ ಸಮಕ್ಷಮದಲ್ಲಿ ಭೂಮಿ ಪೂಜೆ ನಡೆಯಿತು. 

ಬೈಚನಹಳ್ಳಿ ರುದ್ರ ಭೂಮಿಗೆ ಹೋಗುವ ರಸ್ತೆ ನಿರ್ಮಾಣಕ್ಕೆ, ಸಾಯಿ ಆಸ್ಪತ್ರೆ ಸಮೀಪದ ಕಾಲಭೈರವೇಶ್ವರ ಬಡಾವಣೆಯ ನೂತನರಸ್ತೆ ಕಾಮಗಾರಿಗೆ, ಕರಿಯಪ್ಪ ಬಡಾವಣೆಯ ಹನುಮರಾಜ್ ಅವರ ಮನೆ ಸಮೀಪದ ಕಾಂಕ್ರೀಟ್ ರಸ್ತೆ ಮತ್ತು ಸಂತ ಸೆಬಾಸ್ಟಿನ್ ಚರ್ಚ್ ಕಾಂಕ್ರೀಟ್ ರಸ್ತೆಯ ಕಾಮಗಾರಿಗಾಗಿ ಭೂಮಿ ಪೂಜೆ, ಹಳೆ ಹೌಸಿಂಗ್ ಬೋರ್ಡ್ ಕಾಲೋನಿಯ ಜ್ಞಾನಭಾರತಿ ಶಾಲೆಗೆ ಹೊಂದಿಕೊಂಡ ರಸ್ತೆ ನಿರ್ಮಾಣ ಭೂಮಿ ಪೂಜೆ ನೆರವೇರಿಸಲಾಯಿತು.

 ಈ ಸಂದರ್ಭ ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಪುರಸಭಾ ಮುಖ್ಯ ಅಧಿಕಾರಿ ಟಿ.ಎಸ್.ಗಿರೀಶ್,ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡುರಾವ್,ನಗರ ಕಾಂಗ್ರೆಸ್ ಜೋಸೆಫ್ ವಿಕ್ಟರ್ ಸೋನ್ಸ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ರಾದ ಜಿ.ಆರ್. ಪುಷ್ಪಲತಾ, ಕಾಂಗ್ರೆಸ್ ಮುಖಂಡರಾದ ಎನ್ ಟಿ ಜೋಸೆಫ್, ಶಜಿ, ರಾಯ್, ಡಿಸಿಸಿ ಸದಸ್ಯ ಸಜಿ, ಖಲೀಮುಲ್ಲಾ, ಎಂ.ಕೆ. ದಿನೇಶ್, ಎಂ.ಎಂ.ಪ್ರಕಾಶ್, ಜಗದೀಶ್, ಮುಳುಸೋಗೆ ಪಟೇಲ್ ಹರೀಶ್, ಉದ್ಯಮಿಗಳಾದ ಎಂಕೆ ದಿನೇಶ್, ಗೋಂದಿ ಬಸವನಹಳ್ಳಿ ಗೋವಿಂದಪ್ಪ, ನಾಗೇಗೌಡ ಬಡಾವಣೆಯ ಕೃಷ್ಣಪ್ಪ ಮೊದಲಾದವರಿದ್ದರು.

ಕುಶಾಲನಗರ ಸಮೀಪದ ಗೊಂದಿಬಸವನಹಳ್ಳಿ ಗ್ರಾಮದಲ್ಲಿ ರೂ.5 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಶ್ರೀ ದೊಡ್ಡಮ್ಮ ತಾಯಿ ದೇವಾಲಯದ ಕಮಾನು ಅನ್ನು ಶುಕ್ರವಾರ ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0