ಕುಶಾಲನಗರ;ಹಣಕಾಸಿನ ವಿಚಾರದಲ್ಲಿ ಸಂಬಂಧಿಕರ ನಡುವೆ ಜಗಳದಲ್ಲಿ ಮೃತಪಟ್ಟ ವ್ಯಕ್ತಿ

May 18, 2026 - 23:19
 0  1.4k
ಕುಶಾಲನಗರ;ಹಣಕಾಸಿನ ವಿಚಾರದಲ್ಲಿ ಸಂಬಂಧಿಕರ ನಡುವೆ ಜಗಳದಲ್ಲಿ ಮೃತಪಟ್ಟ ವ್ಯಕ್ತಿ

ಕುಶಾಲನಗರ, ಮೇ 18: ಹಣಕಾಸಿನ ವಿಚಾರದಲ್ಲಿ ಸಂಬಂಧಿಕರ ನಡುವೆ ತಳ್ಳಾಟ ನೂಕಾಟದಲ್ಲಿ ತಲೆಗೆ ಘಾಸಿಗೊಂಡು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕೂಡಿಗೆಯಲ್ಲಿ ನಡೆದಿದೆ. ಶಿರಂಗಾಲದ ಮೂಡಲಕೊಪ್ಪಲು ನಿವಾಸಿ ಕೂಡಿಗೆ ಡೇರಿ ನಿವೃತ್ತ ನೌಕರ ಶಿವನಂಜಪ್ಪ (63) ಮೃತ ದುರ್ದೈವಿ. ಮೃತರ ಅಕ್ಕನ ಮಗ‌ ನಿವೃತ್ತ ಪೊಲೀಸ್ ಸಿಬ್ಬಂದಿ ಶ್ರೀನಿವಾಸ್ ನಡುವೆ ಹಣಕಾಸಿನ‌ ವಿಚಾರಕ್ಕೆ ನಡೆದ ಜಟಾಪಟಿ ಸಂದರ್ಭ ನೆಲಕ್ಕೆ‌ ಬಿದ್ದ ಶಿವನಂಜಪ್ಪ ಅವರ ತಲೆಗೆ ಗಂಭೀರ ಘಾಸಿಯಾಗಿ ಮೃತಪಟ್ಟಿದ್ದಾರೆ.

What's Your Reaction?

Like Like 0
Dislike Dislike 0
Love Love 2
Funny Funny 0
Angry Angry 0
Sad Sad 3
Wow Wow 0