ಕುಶಾಲನಗರದ ಹೋಟೆಲ್ ಉದ್ಯಮಿ ಅತಿಥಿ ಭಾಸ್ಕರ್ ನಿಧನ

Dec 31, 2025 - 11:50
 0  956
ಕುಶಾಲನಗರದ ಹೋಟೆಲ್ ಉದ್ಯಮಿ ಅತಿಥಿ ಭಾಸ್ಕರ್ ನಿಧನ

ಕುಶಾಲನಗರ: ಮಡಿಕೇರಿಯಲ್ಲಿ ಹಲವು ವರ್ಷಗಳ ಕಾಲ ಅತಿಥಿ ಹೋಟೆಲ್ ನಡೆಸುತ್ತಿದ್ದ, ಅನಂತರ ಕುಶಾಲನಗರದ ಪ್ರವೇಶದಲ್ಲಿ ಅತಿಥಿ ರೆಸ್ಟೋರೆಂಟ್ ಆರಂಭ ಮಾಡಿದ್ದ, ಕ್ರಿಯಾಶೀಲ ಪ್ರವಾಸೋದ್ಯಮಿ ಆಗಿದ್ದ ಭಾಸ್ಕರ್ ಕೂರ್ಗ್ ಹೋಟೆಲ್ ರೆಸಾರ್ಟ್ ಅಸೋಸಿಯೇಷನ್ ನಲ್ಲಿ ಸಕ್ರಿಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ ಭಾಸ್ಕರ್ ಅವರು ನಿಧನರಾಗಿದ್ದಾರೆ.

 ದಿನೇಶ್ ಕಾರ್ಯಪ್ಪ, ಕೊಡಗು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ. ಆರ್.ನಾಗೇಂದ್ರ ಪ್ರಸಾದ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. ಅನೇಕ ದಿನಗಳ ಅನಾರೋಗ್ಯದ ಬಳಿಕ ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ವಿಧಿವಶರಾದ ಭಾಸ್ಕರ್ ಅವರ ಪಾರ್ಥಿವ ಶರೀರ ಇಂದು ಮಧ್ಯಾಹ್ನ 3 ಗಂಟೆ ವೇಳೆಗೆ ಕುಶಾಲನಗರ ತಲುಪುವ ನಿರೀಕ್ಷೆ ಇದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 1