ಕುಟಂಬ ಕಲರವ;ಎಡಿಕೇರಿ ಹಾಗೂ ಇಳಂದಿಲ ತಂಡಗಳು ಕ್ವಾರ್ಟರ್ ಫೈನಲ್ ಗೆ ಲಗ್ಗೆ

Apr 22, 2026 - 11:40
 0  286
ಕುಟಂಬ ಕಲರವ;ಎಡಿಕೇರಿ ಹಾಗೂ ಇಳಂದಿಲ ತಂಡಗಳು ಕ್ವಾರ್ಟರ್ ಫೈನಲ್ ಗೆ ಲಗ್ಗೆ
ಎಡಿಕೇರಿ ತಂಡ

ಮಡಿಕೇರಿ: ಮರಗೋಡುವಿನ ಗೌಡ ಇವಿನಿಂಗ್ ಸ್ಟಾರ್ ವತಿಯಿಂದ ಭಾರತಿ ಪ.ಪೂ. ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಗೌಡ ಸಮುದಾಯಗಳ ನಡುವಿನ ಕ್ರಿಕೆಟ್ ಪಂದ್ಯಾಟ ಕುಟುಂಬ ಕಲರವದಲ್ಲಿ ಮಂಗಳವಾರ ಎಡಿಕೇರಿ ಹಾಗೂ ಇಳಂದಿಲ ತಂಡಗಳು ಪ್ರಿ ಕ್ವಾರ್ಟರ್ ಹಂತಕ್ಕೆ ಪ್ರವೇಶ ಪಡೆದಿವೆ.

ಮಂಗಳವಾರ ನಡೆದ ಪಂದ್ಯಾಟದಲ್ಲಿ ಕೊಂಪುಳಿದ ತಂಡ ನಿಗದಿತ ಓವರ್‌ನಲ್ಲಿ 4 ವಿಕೆಟ್‌ಗೆ 84 ರನ್ ಗಳಿಸಿದರೆ, 9 ವಿಕೆಟ್ ಕಳೆದುಕೊಂಡು 35 ರನ್ ಮಾತ್ರ ಗಳಿಸಿ ಸೋಲನುಭವಿಸಿತು. ಕೊಂಪುಳಿರ ರಂಜು 5ಸಿಕ್ಸರ್‌ಗಳ ನೆರವಿನೊಂದಿಗೆ 53 ರನ್ ಕಲೆ ಹಾಕಿದರು. ಕಾವೇರಿ ಮನೆ ತಂಡ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 24 ರನ್ ಗಳಿಸಿದರೆ, ಬೊಳ್ಳೂರು ತಂಡ ಕೇವಲ ಒಂದು ಓವರ್‌ನಲ್ಲಿ ಯಾವದೇ ವಿಕೆಟ್ ನಷ್ಟವಿಲ್ಲದೆ ಗುರಿ ಸಾಧಿಸಿತು. ಎಡಿಕೇರಿ ತಂಡ ಒಂದು ವಿಕೆಟ್‌ಗೆ 125 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿದರೆ, ಕುದುಪಜೆ ತಂಡ 5 ವಿಕೆಟ್ ಕಳೆದುಕೊಂಡು 34 ರನ್ ಮಾತ್ರ ಗಳಿಸಿ 91 ರನ್‌ಗಳ ಭಾರೀ ಅಂತರದಿಂದ ಸೋಲನುಭವಿಸಿತು. ಎಡಿಕೇರಿ ಬಿಪಿನ್ ಭರ್ಜರಿ 7 ಸಿಕ್ಸರ್‌ಗಳ ನೆರವಿನೊಂದಿಗೆ 42 ರನ್ ಗಳಿಸಿದರು.

ಅಂಚೆಮನೆ ತಂಡ 9 ವಿಕೆಟ್‌ಗೆ ಕೇವಲ 19 ರನ್ ಗಳಿಸಿದರೆ, ನೆಯ್ಯಣಿ ತಂಡ ಒಂದು ವಿಕೆಟ್ ನಷ್ಟದಲ್ಲಿ ಗುರಿ ತಲಪಿತು. ಪಡ್ಡು ಮನೆ ತಂಡ 7 ವಿಕೆಟ್‌ಗೆ 44 ರನ್ ಗಳಿಸಿದರೆ, ಇಳಂದಿಲ ತಂಡ 6 ವಿಕೆಟ್ ನಷ್ಟದಲ್ಲಿ ಗೆಲುವು ಸಾಧಿಸಿತು. ಕೊಂಪುಳಿರ ತಂಡ 2 ವಿಕೆಟ್‌ಗೆ 31 ರನ್ ಗಳಿಸಿದರೆ, ಕೆದಂಬಾಡಿ ತಂಡ 2.5 ಓವರ್‌ಗಳಲ್ಲಿ 35 ರನ್ ಗಳಿಸಿ ಗೆಲುವು ಸಾಧಿಸಿತು.

 ಮತ್ತೊಂದು ತಂಡ ಯಾವದೇ ವಿಕೆಟ್ ನಷ್ಟವಿಲ್ಲದೆ 87 ರನ್ ಗಳಿಸಿದರೆ ಬೊಳ್ಳೂರು ತಂಡ 8 ವಿಕೆಟ್ ಕಳೆದುಕೊಂಡು 18 ರನ್ ಗಳಿಸಿ 69 ರನ್‌ಗಳ ಅಂತರದಿಂದ ಸೋಲನುಭವಿಸಿತು. ಪೇರಿಯನ 4 ವಿಕೆಟ್‌ಗೆ 55 ರನ್ ಗಳಿಸಿದರೆ, ನೆಯ್ಯಣಿ ತಂಡ 5 ವಿಕೆಟ್ ಕಳೆದುಕೊಂಡು 47 ರನ್ ಗಳಿಸಿ 8 ರನ್‌ಗಳ ಅಂತರದಿಂದ ಸೋಲನುಭವಿಸಿತು. ಕರ್ಣಯ್ಯನ ತಂಡ 4 ವಿಕೆಟ್‌ಗೆ 67 ರನ್ ಗಳಿಸಿದರೆ, ಇಳಂದಿಲ್ಲ ತಂಡ 2 ವಿಕೆಟ್ ನಷ್ಟದಲ್ಲಿ ಗೆಲುವು ಸಾಧಿಸಿತು.

ಇನ್ನೊಂದು ಪಂದ್ಯದಲ್ಲಿ ಎಡಿಕೇರಿ ತಂಡ 6 ವಿಕೆಟ್‌ ಗೆ 46 ರನ್ ಕಲೆ ಹಾಕಿದರೆ, ಕದಂಬಾಡಿ ತಂಡ 8 ವಿಕೆಟ್‌ 38 ರನ್ ಗಳಿಸಿ 8 ರನ್‌ಗಳ ಅಂತರದಿಂದ ಸೋಲನುಭವಿಸಿತು. ಇಳಂದಿಲ ತಂಡ 5 ವಿಕೆಟ್‌ 55 ರನ್ ಗಳಿಸಿದರೆ, ಪೇರಿಯನ ತಂಡ 5 ವಿಕೆಟ್‌ಗೆ 21 ರನ್ ಗಳಿಸಿ 34 ರನ್‌ಗಳ ಅಂತರದಿಂದ ಸೋಲು ಕಂಡಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0