ಮಡಿಕೇರಿ-ವಿರಾಜಪೇಟೆ ಸಂಪರ್ಕ ಕಲ್ಪಿಸುವ ಮೇಕೇರಿ ರಸ್ತೆ ಬದಿ ಮಣ್ಣು ಕುಸಿತ:ಮಳೆ ನಿಂತ ಕೂಡಲೇ ಕಾಮಗಾರಿ ಆರಂಭಿಸಲು ಶಾಸಕ ಎಎಸ್ ಪೊನ್ನಣ್ಣ ಸೂಚನೆ
admincoorgdaily
ಮಡಿಕೇರಿ: ಮಡಿಕೇರಿ- ವಿರಾಜಪೇಟೆ ಸಂಪರ್ಕ ಕಲ್ಪಿಸುವ ಮೇಕೇರಿ ಬಳಿ ಮಳೆಯಿಂದಾಗಿ ಹಾನಿಯಾದ ರಸ್ತೆಯನ್ನು ಶಾಸಕರಾದ ಎ.ಎಸ್ ಪೊನ್ನಣ್ಣ ಅವರು ವೀಕ್ಷಿಸಿದರು. ತೀವ್ರ ಮಳೆಯಿಂದಾಗಿ ರಸ್ತೆ ಹಾನಿಗೀಡದನ್ನು ಗಮನಿಸಿದ ಶಾಸಕರು, ರಸ್ತೆಯನ್ನು ವೀಕ್ಷಿಸಿ ಸ್ಥಳದಲ್ಲೇ ಇದ್ದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಮಳೆ ನಿಂತ ಕೂಡಲೇ ಗುಣಮಟ್ಟದ ರಸ್ತೆಯನ್ನು ನಿರ್ಮಾಣ ಮಾಡುವಂತೆ ಸೂಚಿಸಿದರು.