ಶಾಸಕ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಲು ಮನವಿ ಸಲ್ಲಿಸಿದ ಕೊಡಗು ಅರೆಭಾಷೆ ಗೌಡ ಸಮಾಜದ ಪ್ರಮುಖರು
ಬೆಂಗಳೂರು:ಅರೆಭಾಷೆ ಗೌಡ ಸಮುದಾಯದ ಹಲವು ಬೇಡಿಕೆಗಳನ್ನೊಳಗೊಂಡ ಮನವಿಯೊಂದಿಗೆ, ಸಮಾಜದ ಪ್ರಮುಖರು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್ ಪೊನ್ನಣ್ಣ ರವರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು, ಅವರ ನಿವಾಸದಲ್ಲಿ ಭೇಟಿಯಾದರು.
ಪ್ರಮುಖವಾಗಿ ಪೊನ್ನಣ್ಣ ರವರನ್ನು ಮುಂದಿನ ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ಪ್ರಮುಖ ಖಾತೆಯೊಂದಿಗೆ ಸಂಪುಟ ದರ್ಜೆ ಸಚಿವ ಸ್ಥಾನ ನೀಡಬೇಕೆಂಬ ಮನವಿಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತಿತೀರ ಧರ್ಮಜ ಉತ್ತಪ್ಪ, ಅರೆಭಾಷೆ ಗೌಡ ಸಮಾಜದ ಪ್ರಮುಖರಾದ ಸೂರ್ತಲೆ ಸೋಮಣ್ಣ, ಮೋಹನ್ ದಾಸ್, ನವೀನ್, ಗಿರೀಶ್, ಸಂದೀಪ್, ಪರ್ಮಲೆ. ಗಣೇಶ್. ಪಿ ಎಲ್ ಸುರೇಶ್. ದಂಬೆ ಕೊಡಿ ಭೀಷ್ಮ ಪಟ್ಟಡ ದೀಪಕ್ ಬಂಗಾರ ಕೊಡಿ ತುಳಸಿ ಗಾಂಧಿ ಪ್ರಸಾದ್ ಪೆರು ಮುಂಡ ರೋಹಿಣಿ ಜಯರಾಮ್ ಮೊದಲಾದವರು ಉಪಸ್ಥಿತರಿದ್ದರು.