ಕೊಮ್ಮೆತೋಡು ಗ್ರಾಮದಲ್ಲಿ ಪೂರ್ಣಗೊಂಡ ವಿವಿಧ ಅಭಿವೃದ್ಧಿಕಾಮಗಾರಿ ಉದ್ಘಾಟಿಸಿದ ಶಾಸಕ ಎ. ಎಸ್. ಪೊನ್ನಣ್ಣ
ವರದಿ :ಝಕರಿಯ ನಾಪೋಕ್ಲು
ವಿರಾಜಪೇಟೆ :ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕೊಮ್ಮೆತೋಡು ಗ್ರಾಮದಲ್ಲಿ ಪೂರ್ಣಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ. ಎಸ್ ಪೊನ್ನಣ್ಣ ಅವರು ಉದ್ಘಾಟಿಸಿದರು.
ಗ್ರಾಮದಲ್ಲಿ ಈ ಹಿಂದೆ ಸ್ಥಳೀಯ ಪ್ರಮುಖರ ಮನವಿಯಂತೆ ನಿರ್ಮಿಸಲಾದ ಬದ್ರಿಯಾ ಜುಮಾ ಮಸೀದಿ ಕೊಮ್ಮೆತ್ತೋಡುವಿನ ನೂತನ ಕಚೇರಿ, ವೇದಿಕೆ ಹಾಗೂ ಕಬರ್ ಸ್ಥಾನದ ಆವರಣಗೋಡೆಯನ್ನು ಲೋಕಾರ್ಪಣಗೊಳಿಸಿ ಮಾತನಾಡಿದ ಶಾಸಕ ಪೊನ್ನಣ್ಣ ಕಬರ್ ಸ್ಥಾನದ ಆವರಣಗೋಡೆ ನಿರ್ಮಾಣಕ್ಕೆ30 ಲಕ್ಷ ರೂ ಅನುದಾನ ಒದಗಿಸಲಾಗಿತ್ತು.
ಇದೀಗ ಇದರ ಕಾಮಗಾರಿ ಪೂರ್ಣಗೊಂಡಿದ್ದು ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿ ಲೋಕಾರ್ಪಣೆ ಗೊಳಿಸಲಾಗಿದೆ. ನನ್ನ ಅವಧಿಯಲ್ಲಿ ಎಲ್ಲಾ ಜನಾಂಗದ ಅಭಿವೃದ್ಧಿಗೆ ಸದಾ ಸಿದ್ಧನಿರುವುದಾಗಿ ತಿಳಿಸಿದರು.
ಜಮಾಅತ್ ಅಧ್ಯಕ್ಷರಾದ ಕೋಳುಮಂಡ ರಫಿಕ್ ಮಾತನಾಡಿ ಶಾಸಕರು ಜಿಲ್ಲೆಯ ಸರ್ವ ಜನಾಂಗದ ಅಭಿವೃದ್ಧಿಗೆ ಶ್ರಮವಹಿಸುವ ನಾಯಕರಾಗಿದ್ದಾರೆ. ರಾಜ್ಯದಲ್ಲಿಯೇ ಮಾದರಿ ಶಾಸಕರಾಗಿರುವ ಪೊನ್ನಣ್ಣ ಅವರ ಅವಧಿಯಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಅಭಿವೃದ್ಧಿಗಳು ನಡೆಯಲಿ ಎಂದು ಆಶಿಸಿದರು.
ಕೊಡಗು ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಅನೀಫ್ ಮಾತನಾಡಿ ಶಾಸಕರ ಪ್ರಯತ್ನದಿಂದ ಜಿಲ್ಲೆಯಲ್ಲಿ ಹಲವಾರು ಕಾಮಗಾರಿಗಳು ಪ್ರಗತಿಯಲ್ಲಿದ್ದು ಮುಂದಿನ ದಿನಗಳಲ್ಲಿ ಉದ್ಘಾಟನೆಗೆ ಸಜ್ಜುಗೊಂಡಿವೆ ಎಂದರು. ಕಾರ್ಯಕ್ರಮದಲ್ಲಿ ಜಮಾಅತ್ ವತಿಯಿಂದ ಶಾಸಕ ಪೊನ್ನಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಮಸೀದಿಯ ಧರ್ಮಗುರುಗಳು ಹಮೀದ್ ಸಖಾಫಿ, ಅಹ್ಮದ್ ಹಾಜಿ, ಹಂಸ ಹಾಜಿ, ತಾಲೂಕು ಬಗರ್ ಹುಕುಂ ಅಧ್ಯಕ್ಷ ಸಲಾಂ, ದುದ್ದಿಯಂಡ ಸೂಫಿ ಹಾಜಿ, ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷ ಮತೀನ್, ಪುರಸಭೆ ಮಾಜಿ ಸದಸ್ಯ ರಾಜೇಶ್ ಪದ್ಮನಾಭ, ವಿರಾಜಪೇಟೆ ಯೂತ್ ಕಾಂಗ್ರೆಸ್ ನ ಶಬೀರ್, ಕುಂಡ ಚ್ಚಿರ ಮಂಜು ದೇವಯ್ಯ ಸೇರಿದಂತೆ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.