ಗ್ರಾಮೀಣ ಕುಶಲಕರ್ಮಿಗಳಿಗೆ ಉಚಿತ ವಿದ್ಯುತ್ ಉಪಕರಣ ವಿತರಿಸಿದ ಶಾಸಕ ಎಎಸ್ ಪೊನ್ನಣ್ಣ

Jun 20, 2026 - 10:54
 0  232
ಗ್ರಾಮೀಣ ಕುಶಲಕರ್ಮಿಗಳಿಗೆ ಉಚಿತ ವಿದ್ಯುತ್ ಉಪಕರಣ ವಿತರಿಸಿದ ಶಾಸಕ ಎಎಸ್ ಪೊನ್ನಣ್ಣ

ವಿರಾಜಪೇಟೆ, ಜೂನ್ 20: ಕೊಡಗು ಜಿಲ್ಲಾ ಪಂಚಾಯತ್, ಗ್ರಾಮೀಣ ಕೈಗಾರಿಕಾ ವಿಭಾಗ (ಖಾಗ್ರಾ) ವತಿಯಿಂದ 2025-26ನೇ ಸಾಲಿಗೆ ಮಂಜೂರಾದ ಗ್ರಾಮೀಣ ಕುಶಲಕರ್ಮಿಗಳಿಗೆ ಉಚಿತ ವಿದ್ಯುತ್ ಚಾಲಿತ ಉಪಕರಣಗಳ ವಿತರಣಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರು ಭಾಗವಹಿಸಿ ಪಲಾನುಭವಿಗಳಿಗೆ ಸಲಕರಣೆಗಳನ್ನು ವಿತರಿಸಿದರು. ಈ ಯೋಜನೆಯಡಿ ಅರ್ಹ ಕುಶಲಕರ್ಮಿಗಳಿಗೆ ವೃತ್ತಿ ಅಭಿವೃದ್ಧಿಗೆ ಪೂರಕವಾದ ವಿದ್ಯುತ್ ಉಪಕರಣಗಳನ್ನು ಉಚಿತವಾಗಿ ವಿತರಿಸಲಾಯಿತು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ತಾಲೂಕು ಬಗರ್ ಹುಕುಂ ಅಧ್ಯಕ್ಷ ಆರ್ ಕೆ ಸಲಾಂ, ಪುರಸಭೆ ಮಾಜಿ ಸದಸ್ಯ ರಾಫಿ, ಅತಿಫ್, ಪಕ್ಷದ ಮುಖಂಡರಾದ ಸೂರಜ್ ಹೊಸೂರು, ಕಲಿಯಂಡ ಸಂಪನ್ ಅಯ್ಯಪ್ಪ, ಕುಂಡಚ್ಚಿರ ಮಂಜು ದೇವಯ್ಯ, ಆಪ್ರು ರವೀಂದ್ರ, ಮಚ್ಚಾರಂಡ ಕಿರಣ್, ಬಟ್ಟಕಾಳಂಡ ರಾಜ, ಸಿರಾಜ್, ಅಯೂಬ್, ಮಂಜುನಾಥ್, ಇಲಾಖೆಯ ಅಧಿಕಾರಿಗಳು ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0