ತಟ್ಟಳ್ಳಿ ಹಾಡಿ ನಿವಾಸಿಗಳಿಗೆ ಸ್ವಂತ ವೆಚ್ಚದಲ್ಲಿ ಧ್ವನಿ ವರ್ಧಕ ಕೊಡುಗೆ ನೀಡಿದ ಶಾಸಕ ಎಎಸ್ ಪೊನ್ನಣ್ಣ
ವಿರಾಜಪೇಟೆ:ತಾಲೂಕಿನ ಮಾಲ್ದಾರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ತಟ್ಟಳ್ಳಿ ಹಾಡಿ ನಿವಾಸಿಗಳಿಗೆ, ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ತಮ್ಮ ಸ್ವಂತ ವೆಚ್ಚದಲ್ಲಿ ಧ್ವನಿವರ್ಧಕವನ್ನು ಖರೀದಿಸಿ ಕೊಡುಗೆಯಾಗಿ ನೀಡಿದರು. ಭಕ್ತಿ ಭಾವದಿಂದ ಆಚರಿಸುತ್ತಿರುವ ಗಣೇಶ ಹಬ್ಬಕ್ಕೆ ಮತ್ತಷ್ಟು ಮೆರುಗು ನೀಡಲು ಈ ಕೊಡುಗೆಯನ್ನು ನೀಡಿದರು. ಶಾಸಕರ ಕೊಡುಗೆಯನ್ನು ಅತ್ಯಂತ ಪ್ರೀತಿಯಿಂದ ಸ್ವೀಕರಿಸಿದ ನಿವಾಸಿಗಳು, ಧನ್ಯವಾದಗಳು ಅರ್ಪಿಸುತ್ತಾ ಕಳೆದ ವರ್ಷವೂ ಶಾಸಕರು, ತಮ್ಮ ಸ್ವಂತ ಹಣದಲ್ಲಿ ನೀಡಿದ ಕೊಡುಗೆಯ ಬಗ್ಗೆಯೂ ಸ್ಮರಿಸಿಕೊಂಡರು.