ಆದಿವಾಸಿ ಬುಡಕಟ್ಟು ವಸತಿ ಶಾಲೆಯ ಶಿಕ್ಷಕರ ಸಮಸ್ಯೆಗಳ ಕುರಿತು ಸಭೆ ನಡೆಸಿದ ಶಾಸಕ ಎಎಸ್ ಪೊನ್ನಣ್ಣ
ಬೆಂಗಳೂರು:ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯ ಶಿಕ್ಷಕರ ಸಮಸ್ಯೆಗಳ ಕುರಿತು ಬುಧವಾರ ವಿಧಾನ ಸೌಧ ಕಚೇರಿಯಲ್ಲಿ ಸಭೆ ನಡೆಸಿದರು.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಪರಿಶಿಷ್ಟ ವರ್ಗಗಳ ಅಧೀನದಲ್ಲಿ ಇರುವ ಮಹರ್ಷಿ ವಾಲ್ಮೀಕಿ ಆದಿವಾಸ ಬುಡಕಟ್ಟು ವಸತಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿತ್ತಿರುವ ಹತ್ತು ವರ್ಷಕ್ಕೂ ಮೇಲ್ಪಟ್ಟು ಸೇವಾ ಸಲ್ಲಿಸುತ್ತಿರುವ ಶಿಕ್ಷಕರನ್ನು ಸಕ್ರಮಗೊಳಿಸುವುದು, ಅರ್ಜಿ ಸಮಿತಿಯ ತೀರ್ಮಾನದಂತೆ ನೇರ ನೇಮಕಾತಿ/ ಸೇವಾ ಭದ್ರತೆ ಒದಗಿಸುವುದು ಹಾಗೂ T.E.T ಯಿಂದ ವಿನಾಯಿತಿ ಒದಗಿಸುವುದು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಪ್ರಾಂಶುಪಾಲರ ಮತ್ತು ಶಿಕ್ಷಕರ ಸೇವೆಯನ್ನು ವಿಲೀನ ಗೊಳಿಸಿರುವ ರೀತಿ ಇವರನ್ನು ಸಹ ವಿಲೀನಗೊಳಿಸುವುದು.
ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಮೊರಾಜಿ ದೇಸಾಯಿ ವಸತಿ ಶಾಲೆಗಳನ್ನು ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಸಂಘ ರಚನೆಯಾಗಿರುವಂತೆ ರಾಜ್ಯದ 119 ವಾಲ್ಮೀಕಿ ಆಶ್ರಮ ಶಾಲೆಗಳಿಗೆ ಸಂಘ ರಚಿಸಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ 10 ವರ್ಷ ಮೇಲ್ಪಟ್ಟು ದುಡಿಯಿತ್ತಿರುವ ಶಿಕ್ಷಕರನ್ನು ಸಂಘದಲ್ಲಿ ವಿಲೀನ ಮಾಡಿ ಸಕ್ರಮಾತಿ/ ಸೇವಾ ಭದ್ರತೆ ಒದಗಿಸುವುದು. ಉಚ್ಚನ್ಯಾಯಾಲಯದ ಆದೇಶದಂತೆ ಕರ್ನಾಟಕ ವಸತಿ ಶಿಕ್ಷಣದ ಅಧೀನದಲ್ಲಿರುವ ಹೊರಸಂಪನ್ಮೂಲ ಭೋದಕ ಹಾಗೂ ಭೋದಕೇತರ ಸೇವಾ ಸಕ್ರಮಾತಿಯಂತೆ ನಮ್ಮನ್ನು ಪರಿಗಣಿಸುವ ಕುರಿತು ಬುಡಕಟ್ಟು ವಸತಿ ಶಾಲೆಯ ಶಿಕ್ಷಕರು ಸಲ್ಲಿಸಿರುವ ಮನವಿಯನ್ನು ಪರಿಗಣಿಸುವ ಬಗ್ಗೆ ಅಧಿಕಾರಿಗಳಿಂದ ಎ ಎಸ್ ಪೊನ್ನಣ್ಣ ರವರು ಪ್ರಸ್ತಾಪಿಸಿ ಇವರ ಮನವಿಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸಕ್ರಮಗೊಳಿಸುವ ಬಗ್ಗೆ ಕ್ರಮವಹಿಸಲು ಅಧಿಕಾರಿಗಳಿಗೆ ತಿಳಿಸಿದರು. ಸಭೆಯಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿವರಾದ ಶ್ರೀ ರಂದೀಪ್ IAS ಹಾಗೂ ಹಿರಿಯ ಅಧಿಕಾರಿಗಳು ಹಾಜರಿದ್ದರು.