ಹಾಲುಗುಂದ-ಬೈರಂಬಾಡ ನೂತನ ರಸ್ತೆ ಉದ್ಘಾಟಿಸಿದ ಶಾಸಕ ಎ‌ಎಸ್ ಪೊನ್ನಣ್ಣ

ಹಾಲುಗುಂದ-ಬೈರಂಬಾಡ ನೂತನ ರಸ್ತೆ ಉದ್ಘಾಟಿಸಿದ ಶಾಸಕ ಎ‌ಎಸ್ ಪೊನ್ನಣ್ಣ

ವಿರಾಜಪೇಟೆ:ಹಾಲುಗುಂದ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಹಾಲುಗುಂದ-ಬೈರಂಬಾಡ ರಸ್ತೆಯನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಇಂದು ಲೋಕಾರ್ಪಣೆಗೊಳಿಸಿದರು.

 ಹಲವಾರು ವರ್ಷಗಳಿಂದ ಅಭಿವೃದ್ಧಿ ಕಾಣದೆ ನೆನೆಗುದಿಗೆ ಬಿದ್ದಿದ್ದ ಈ ರಸ್ತೆಯನ್ನು ಮಾನ್ಯ ಶಾಸಕರು ವಿಶೇಷ ಕಾಳಜಿಯಿಂದ ಈ ಭಾಗದ ಜನರ ಅನುಕೂಲಕ್ಕಾಗಿ ₹ 15 ಲಕ್ಷ ಅನುದಾನ ಒದಗಿಸಿದ್ದರು. ಅಲ್ಲದೆ ಈ ಭಾಗದಲ್ಲಿ ₹ 35 ಲಕ್ಷ ಅನುದಾನದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಗದ್ದೆಗೆ ತಡೆಗೋಡೆಯನ್ನು ನಿರ್ಮಿಸಲು ವ್ಯವಸ್ಥೆ ಕಲ್ಪಿಸಿದ್ದಾರೆ ಮಾತ್ರವಲ್ಲದೆ, ಈ ಹಿಂದೆ ಈ ಭಾಗದಲ್ಲಿ ಸುಮಾರು ನಾಲ್ಕು ಕಿಲೋಮೀಟರ್ ಅಷ್ಟು ಉದ್ದದ ವಿದ್ಯುತ್ ಸಂಪರ್ಕ ತೋಟದ ಮಧ್ಯ ಹಾದು ಹೋಗುತ್ತಿದ್ದು ಇದರಿಂದ ಸಾರ್ವಜನಿಕರಿಗೆ ತುಂಬಾ ಅನಾನುಕೂಲವಾಗುತ್ತಿತ್ತು. ಇದನ್ನು ಗಮನಿಸಿದ ಶಾಸಕರು ಇಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ನೂತನ ಕೇಬಲ್ ಅನ್ನು ರಸ್ತೆಯ ಬದಿಯಲ್ಲಿ ಅಳವಡಿಸಲು ಸೂಚಿಸುವ ಮೂಲಕ ನೂತನವಾಗಿ ಗುಣಮಟ್ಟದ ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಿ ಕೊಟ್ಟಿರುತ್ತಾರೆ. ಈ ಎಲ್ಲಾ ಕಾಮಗಾರಿಗಳನ್ನು ಸ್ಮರಿಸಿಕೊಂಡ ಸ್ಥಳೀಯರು ಮಾನ್ಯ ಶಾಸಕರಿಗೆ ಧನ್ಯವಾದಗಳು ಅರ್ಪಿಸಿದರು.

ಈ ಸಂದರ್ಭದಲ್ಲಿ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ, ಪಂಚಾಯಿತಿ ಅಧ್ಯಕ್ಷರಾದ ಪಂದಿಕಂಡ ದಿನೇಶ್, ಸದಸ್ಯರಾದ ಅಂದಾಯಿ, ಪೂವಯ್ಯ, ವಲಯ ಅಧ್ಯಕ್ಷರು ಲಕ್ಷ್ಮಣ, ಅಬ್ದುಲ್ ರೆಹಮನ್, ಸ್ಥಳೀಯರಾದ ಮೇಕೆರೀರ ನಾಣಯ್ಯ, ಕ್ಯಾಪ್ಟನ್ ಮಾದಪ್ಪ, ತಾಲೂಕು ಕೆ ಡಿ ಪಿ ಸದಸ್ಯರು ಕೋಲುಮಂಡ ರಫೀಕ್, ಪುರಸಭೆ ಸದಸ್ಯರಾದ ಶಬರಿಷ್, ಪಕ್ಷದ ಪ್ರಮುಖರು ಕುಂಡಚೀರ ಮಂಜು ದೇವಯ್ಯ, ಬಟ್ಟಕಳಂಡ ರಾಜ ದಿನೇಶ್, ಮಂಜುನಾಥ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.