Kodagu

ಕೊಡವ ಮುಸ್ಲಿಂ ಕ್ರಿಕೆಟ್ ಪಂದ್ಯಾವಳಿಗೆ ಶಾಸಕ‌ ಎಎಸ್ ಪೊನ್ನಣ್ಣ ಚಾಲನೆ

admincoorgdaily

ಕೊಡವ ಮುಸ್ಲಿಂ ಕ್ರಿಕೆಟ್ ಪಂದ್ಯಾವಳಿಗೆ ಶಾಸಕ‌ ಎಎಸ್ ಪೊನ್ನಣ್ಣ ಚಾಲನೆ

ವಿರಾಜಪೇಟೆ; ಕೊಡವ ಜಮ್ಮ ಮುಸ್ಲಿಂ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ರವರು ಆಯೋಜಿಸಿದ ಪುದಿಯಂಡ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟಕರಾಗಿ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು.

ಅರಮೇರಿಯಲ್ಲಿರುವ ಎಸ್ಎಂಎಸ್ ಮೈದಾನದಲ್ಲಿ ಆಯೋಜನೆಗೊಂಡ ಈ ಪಂದ್ಯಕೂಟದಲ್ಲಿ, ಕೊಡುವ ಜಮ್ಮ ಮುಸ್ಲಿಂ ಕುಟುಂಬದ ತಂಡಗಳು ಭಾಗವಹಿಸುತ್ತಿದ್ದು, ಕ್ರಿಕೆಟ್ ಪಂದ್ ಪಂದ್ಯಾಕೂಟವನ್ನು ಉದ್ಘಾಟಿಸಿ ಶುಭ ಕೋರಿದ ಶಾಸಕರು,

 ಅತ್ಯಂತ ಪ್ರತಿಭಾವಂತ ಯುವಕರನ್ನು ಹೊಂದಿರುವ ಈ ಕೌಟುಂಬಿಕ ಕ್ರಿಕೆಟ್ ಪಂದ್ಯಾಟವು ಹೊಸ ಪ್ರತಿಭೆಗಳು ಅನಾವರಣಗೊಳ್ಳುವಂತೆ ಯಶಸ್ಸು ಕಾಣುತ್ತಾ ಯುವ ಕ್ರಿಕೆಟ್ ಪ್ರತಿಭೆಗಳನ್ನು ನಾಡಿಗೆ ಪರಿಚಯಿಸುವಂಥ ಆಗಲಿ ಎಂದು ಹಾರೈಸಿದರು.

 ಈ ಸಂದರ್ಭದಲ್ಲಿ ದುಡಿಯಂಡ ಸೂಫಿ ಹಾಜಿ, ಎರ್ಮು ಹಾಜಿ, ಪುದಿಯಂಡ ತಕ್ಕ ಮುಖ್ಯಸ್ಥರು ಮೊಹಮ್ಮದ್, ಹುಸ್ಮಾನ್, ಅಬ್ದುಲಾ, ಜಿಲ್ಲಾ ಅಲ್ಪಸಂಖ್ಯಾತರ ಅಧ್ಯಕ್ಷರು ಹನೀಫ್,ಮಾಜಿ ಪುರಸಭೆ ಸದಸ್ಯರು ರಾಫಿ, ಮಿತ್ತಲಂಡ ಇಸ್ಮಾಯಿಲ್, ಕುಂಡಚ್ಚಿರ ಮಂಜು ದೇವಯ್ಯ,ಆಸಾಫ್,ಹಾಜಿ, ತಾಲೂಕು ಅಲ್ಪಸಂಖ್ಯಾತರ ಅಧ್ಯಕ್ಷರು ರಫೀಕ್, ಹಂಸ, ಮುನೀರ್, ಪವಿಲ್, ಹಾಗೂ ಪ್ರಮುಖರು ಉಪಸ್ಥಿತರಿದ್ದರು.