ದಿವಂಗತ ಮುಕ್ಕಾಟಿರ ಶಿವು ಮಾದಪ್ಪ ರವರ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾಟಕ್ಕೆ ಶಾಸಕ ಎಎಸ್ ಪೊನ್ನಣ್ಣ ಚಾಲನೆ

Apr 19, 2026 - 10:17
Apr 19, 2026 - 10:19
 0  325
ದಿವಂಗತ ಮುಕ್ಕಾಟಿರ  ಶಿವು ಮಾದಪ್ಪ ರವರ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾಟಕ್ಕೆ ಶಾಸಕ ಎಎಸ್ ಪೊನ್ನಣ್ಣ ಚಾಲನೆ

ಪೊನ್ನಂಪೇಟೆ;ತಕುಟ್ಟ ಗ್ರಾಮದಲ್ಲಿ ಆಯೋಜನೆಗೊಂಡ, ಸೂಪರ್ 9 ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟಕರಾಗಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣನವರು ಭಾಗವಹಿಸಿದರು.

ಕಾಂಗ್ರೆಸ್ ಪಕ್ಷದ ಮಾಜಿ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ, ದಿವಂಗತ ಮುಕ್ಕಾಟಿರ ಶ್ರೀ ಶಿವು ಮಾದಪ್ಪ ರವರ ಸ್ಮರಣಾರ್ಥ ಈ ಕ್ರಿಕೆಟ್ ಪಂದ್ಯಾಟ ಆಯೋಜನೆಗೊಂಡಿತ್ತು.

 ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು, ದಿವಂಗತ ಶಿವು ಮಾದಪ್ಪ ರವರು ಕಾಂಗ್ರೆಸ್ ಪಕ್ಷಕ್ಕಾಗಿ ಹಾಗೂ ಜನರಿಗೆ ನೀಡಿದ ಕೊಡುಗೆಯ ಬಗ್ಗೆ ಸ್ಮರಿಸಿದರು. ದಿವಂಗತ ಶಿವು ರವರು ಯುವಕರ ಕಣ್ಮಣಿಯಾಗಿದ್ದು ಅವರ ನೆನಪುಗಳು ನಮ್ಮನ್ನು ಸದಾ ಕಾಡುತ್ತವೆ.

ಇಂದು ಆಯೋಜನೆಗೊಂಡ ಈ ಕ್ರಿಕೆಟ್ ಪಂದ್ಯಾಟ ಅವರ ಯುವ ಬೆಂಬಲಿಗರಿಗೆ ಸ್ಫೂರ್ತಿ ನೀಡುವಂತಾಗಲಿ ಹಾಗೂ ಅವರ ಸತ್ಕಾರ್ಯಗಳು ಎಲ್ಲರಿಗೂ ಮಾದರಿಯಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಮುಕ್ಕಾಟೀರ ಅರ್ಚನ ಮಾದಪ್ಪ ಹಾಗೂ ಕುಟುಂಬಸ್ಥರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ತಿತೀರ ಧರ್ಮಜ ಉತ್ತಪ್ಪ, ಬ್ಲಾಕ್ ಅಧ್ಯಕ್ಷರು ಮಿದೇರಿರ ನವೀನ್, ಡಿಸಿಸಿ ಸದಸ್ಯರು ಪೆಮ್ಮಂಡ ರಾಜ, ಪಾಲ್ವಿನ್ ಪೂಣಚ್ಚ,ನವೀನ್ ಅಯ್ಯಪ್ಪ, ತಿಮ್ಮು ಅರುಣಾ, ಮಂದಣ್ಣ,ಬೋಸು, ಸುಧಿ ಪೊನ್ನಪ್ಪ,ರಾಮಕೃಷ್ಣ,ಫಾರ್ದಿನ್,ಸೋಮಣ್ಣ, ರಾಜ, ಗಿರೀಶ್ ಅಡ್ವೋಕೇಟ್, ಅಪ್ಪಣ್ಣ, ಅಯ್ಯಪ್ಪ ,ಜಯರಾಮ್, ಕುಶಾಲ, ಸುರೇಶ್, ರಾಜನ್, ಶೇಖರ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0