ಯರವ ಜನಾಂಗದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಶಾಸಕ ಎಎಸ್ ಪೊನ್ನಣ್ಣ

May 3, 2026 - 20:53
 0  396
ಯರವ ಜನಾಂಗದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಶಾಸಕ ಎಎಸ್ ಪೊನ್ನಣ್ಣ

ಪೊನ್ನಂಪೇಟೆ;ತಿತಿಮತಿಯಲ್ಲಿ ನಡೆಯುತ್ತಿರುವ ಕ್ರಿಕೆಟ್ ಪಂದ್ಯಾಟದ ಮುಖ್ಯ ಅತಿಥಿಯಾಗಿ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿ ಶುಭ ಕೋರಿದರು.

 ಜಿಲ್ಲೆಯ ಪ್ರಮುಖ ಸಮುದಾಯಗಳಲ್ಲಿ ಒಂದಾಗಿರುವ ಯರವ ಸಮಾಜದ ವತಿಯಿಂದ ಆಯೋಜನೆಗೊಂಡ ಈ ಕ್ರಿಕೆಟ್ ಪಂದ್ಯಾಟಕ್ಕೆ ಶುಭ ಕೋರಿ ಮಾತನಾಡಿದ ಶಾಸಕರು, ಶ್ರಮಿಕ ವರ್ಗಕ್ಕೆ ಸೇರಿದ ಯರವ ಜನಾಂಗದ ಯುವ ಜನತೆಗೆ ಇಂತಹ ಕ್ರೀಡಾಕೂಟಗಳು ತಮ್ಮ ಪ್ರತಿಭೆಯನ್ನು ಅನಾವರಣ ಗೊಳಿಸಲು ಉತ್ತಮ ವೇದಿಕೆಯಾಗಿದೆ.

ಇಂದು ದೇಶದಲ್ಲಿದೆ ಪ್ರತಿಯೊಬ್ಬರು ಮೆಚ್ಚುವ ಕ್ರೀಡೆ ಕ್ರಿಕೆಟ್ ಆಗಿದೆ. ಕ್ರಿಕೆಟ್ ನಲ್ಲಿ ಹಲವಾರು ಯುವಕರು ತಮ್ಮ ಭವಿಷ್ಯವನ್ನು ಕಂಡುಕೊಂಡಿದ್ದಾರೆ. ಸಣ್ಣ ಪ್ರಾಯದಲ್ಲಿ ಕ್ರಿಕೆಟ್ ಆಟದಲ್ಲಿ ವಿಶ್ವವಿಖ್ಯಾತರಾದ ಅನೇಕ ಕ್ರೀಡಾಪಟುಗಳನ್ನು ನಾವು ಕಂಡಿದ್ದೇವೆ.

 ಇಂತಹ ಕ್ರೀಡೆಗಳು ಯುವ ಪ್ರತಿಭೆಗೆ ತಮ್ಮ ಕ್ರೀಡಾ ಜೀವನವನ್ನು ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಬಣ್ಣಿಸಿಯರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ತಿತೀರ ಧರ್ಮಜ ಉತ್ತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮಿದೇರಿರ ನವೀನ್, ವಲಯ ಅಧ್ಯಕ್ಷರು ನವೀನ್, ಚೆಫ್ ಎಲೆಕ್ಟ್ರಿಕಲ್ ಆಫೀಸರ್ ರೋಷನ್ ಅಪ್ಪಚ್ಚು, ಯರವ ಸಮಾಜದ ಅಧ್ಯಕ್ಷರು ಸಿದ್ದಪ್ಪ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ಪಂಕಜ, ಪುಷ್ಪ, ಪಕ್ಷದ ಮುಖಂಡರು ಮಣಿ, ಹಾಗೂ ಯರವ ಜನಾಂಗದ ಸರ್ವ ಸದಸ್ಯರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0