ಚೇನಂಡ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಕರಪತ್ರ ಬಿಡುಗಡೆಗೊಳಿಸಿದ ಶಾಸಕ ಎಎಸ್ ಪೊನ್ನಣ್ಣ
ವಿರಾಜಪೇಟೆ:2026ನೇ ಸಾಲಿನ ಚೇನಂಡ ಕುಟುಂಬ ಹಾಕಿ ಪಂದ್ಯಾವಳಿಯ ಕರಪತ್ರ ಬಿಡುಗಡೆ ಕಾರ್ಯಕ್ರಮವನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಇಂದು ನೆರವೇರಿಸಿದರು. ವಿರಾಜಪೇಟೆಯಲ್ಲಿ ನಡೆದ ಈ ಸರಳ ಕಾರ್ಯಕ್ರಮದಲ್ಲಿ, ಚೇನಂಡ ಕುಟುಂಬದ ಪಟ್ಟಿದಾರರು ಹಾಗೂ ಪ್ರಮುಖರು, ಹಾಕಿ ಪಂದ್ಯಾವಳಿಯ ಸಮಿತಿಯವರು ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ಕರಪತ್ರ ಬಿಡುಗಡೆ ಮಾಡಿ ಶುಭ ಕೋರಿದ ಶಾಸಕರು, ಕೌಟುಂಬಿಕ ಹಾಕಿ ಪಂದ್ಯಾವಳಿಗಳು ಕೇವಲ ಕ್ರೀಡೆ ಮಾತ್ರವಲ್ಲದೆ ಪ್ರತಿಷ್ಠೆಯ ಸಂಕೇತ ಕೂಡ ಆಗಿದೆ. ಕೊಡಗು ಜಿಲ್ಲೆಯು ಅಂತರರಾಷ್ಟ್ರೀಯ ಮಟ್ಟದ ಹಾಕಿ ಪಟುಗಳ ತವರೂರಾಗಿದ್ದು, ಈ ಹಾಕಿ ಪಂದ್ಯಾವಳಿ ಕೂಡ ಯಶಸ್ಸಿನ ಹಾದಿ ತುಳಿಯಲಿ ಹಾಗೂ ಅನೇಕ ಯುವ ಪ್ರತಿಭೆಗಳ ಅನಾವರಣಕ್ಕೆ ಸಾಕ್ಷಿಯಾಗುವಂತಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಅಧಿಕಾರಿ ವೆಂಕಟ್ ರಾಜ್, ಚೇನಂಡ ಕುಟುಂಬದ ಅಧ್ಯಕ್ಷರಾದ ಕಂಬನಿ ಕರುಂಬಯ್ಯ,ಕುಟುಂಬದ ಸದಸ್ಯರು, ಸಂಪನ್ ಅಯ್ಯಪ್ಪ, ವಿನೋದ್, ಪೊನಂಪೇಟೆ ತಹಸೀಲ್ದಾರ್ ಮೋಹನ್, ವಿರಾಜಪೇಟೆ ತಹಸೀಲ್ದಾರ್ ಪ್ರವೀಣ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.