ಹುದಿಕೇರಿಯ ಹುತಾತ್ಮ ಸೈನಿಕರ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿದ ಶಾಸಕ ಎಎಸ್ ಪೊನ್ನಣ್ಣ
ಪೊನ್ನಂಪೇಟೆ: ಅಜ್ಜಿಕುಟ್ಟಿರ ಕುಟುಂಬದ ಐನ್ ಮನೆಯ ಭೇಟಿಯ ಬಳಿಕ ಬೇರೆ ಕಾರ್ಯಕ್ರಮಕ್ಕೆ ತೆರಳುತಿದ್ದ ಸಂದರ್ಭದಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು, ಶಾಸಕರ ಧರ್ಮಪತ್ನಿ ಶ್ರೀಮತಿ ಕಾಂಚನ್ ಪೊನ್ನಣ್ಣ ರವರು, ಶಾಸಕರ ಹಿರಿಯ ಸಹೋದಾರರಾದ ನರೇನ್ ಕಾರ್ಯಪ್ಪ ರವರು ಹುದಿಕೇರಿಯ ಹುತಾತ್ಮ ಸೈನಿಕರ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಯೋಧರು ಬಲ್ಯಮೀದೇರೀರ ಎ ಪ್ರಕಾಶ್, ಬಯವಂಡ ಕಾಳಪ್ಪ, ಬೊಲ್ಲಜಿರಾ ಪಿ ಕಿಶೋರ್, ಬೋಜ್ಜಂಗಡ ದೀಪು ತಿಮ್ಮಯ್ಯ, ಕಿರಿಯಮಾಡ ಮಿಲನ್ ಗಣಪತಿ, ಅಜ್ಜಿಕುಟ್ಟಿರ ಗಿರೀಶ್ ಉಪಸ್ಥಿತರಿದ್ದರು.