ಕಾಳಜಿ ಕೇಂದ್ರದಲ್ಲಿರುವ ಸಂತ್ರಸ್ತರೊಂದಿಗೆ ಗಣೇಶ ಚತುರ್ಥಿ ಆಚರಿಸಿದ ಶಾಸಕ ಡಾ.ಮಂತರ್ ಗೌಡ
ಸೋಮವಾರಪೇಟೆ:ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಮಾದಾಪುರ ಗ್ರಾಮ ಪಂಚಾಯಿತಿ ಗರಗಂದೂರು ಮೊರಾರ್ಜಿ ವಸತಿ ಶಾಲೆಯ ಕಾಳಜಿ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ಇಂದು ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಮಾಡಿದ ಮಾಡಿದ ಶಾಸಕರು ತಾವೇ ಖುದ್ದು ಹೋಗಿ ಸಂತ್ರಸ್ತರಿಗೆ ಊಟ ಬಡಿಸಿ ತಾವು ಸಹ ಅವರ ಜೊತೆಯಲ್ಲಿ ಊಟ ಮಾಡಿ ಕಾಳಜಿ ಕೇಂದ್ರದಲ್ಲಿರುವ ಸಂತ್ರಸ್ತರೊಂದಿಗೆ ಹಬ್ಬವನ್ನು ಆಚರಿಸಿದರು.