10 ವರ್ಷಗಳಿಂದ ಬಗೆಹರಿಯದ ಸಮಸ್ಯೆಗೆ ಕೇವಲ 10 ದಿನಗಳಲ್ಲಿ ಪರಿಹಾರ ಒದಗಿಸಿದ ಶಾಸಕ ಡಾ.ಮಂತರ್ ಗೌಡ

10 ವರ್ಷಗಳಿಂದ ಬಗೆಹರಿಯದ ಸಮಸ್ಯೆಗೆ ಕೇವಲ 10 ದಿನಗಳಲ್ಲಿ ಪರಿಹಾರ ಒದಗಿಸಿದ ಶಾಸಕ ಡಾ.ಮಂತರ್ ಗೌಡ

ಸೋಮವಾರಪೇಟೆ:ತಾಲ್ಲೂಕಿನ ಆಲೇಕಟ್ಟೆ ನಿವಾಸಿ ಯೋಗೇಂದ್ರ ರವರ ಮನೆಯೊಳಗೆ ತೀವ್ರ ಮಳೆಯಿಂದಾಗಿ ರಸ್ತೆ ಮತ್ತು ಚರಂಡಿ ನೀರು ನುಗ್ಗಿ ಅವಾಂತರಗೊಂಡಿದ್ದ ಸಮಸ್ಯೆಗೆ ಕೇವಲ 10 ದಿನಗಳಲ್ಲಿ ಶಾಸಕರಾದ ಡಾ.ಮಂತರ್ ಗೌಡ ರವರು ಪರಿಹಾರ ಒದಗಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಳೆದ 10 ವರ್ಷಗಳಿಂದ ಆಡಳಿತ ವರ್ಗಕ್ಕೆ ಈ ಸಮಸ್ಯೆಯ ಬಗ್ಗೆ ಅರಿವಿದ್ದರೂ ಯಾರೂ ಕೂಡ ಗಮನ ಹರಿಸಿರಲಿಲ್ಲ. ಶಾಸಕರ ಗಮನಕ್ಕೆ ಬಂದ ಕೂಡಲೇ ನೂತನವಾಗಿ ಚರಂಡಿ ಹಾಗೂ ಮೋರಿ ನಿರ್ಮಾಣ ಮಾಡುವ ಮೂಲಕ ಸಮಸ್ಯೆಗೆ ಪರಿಹಾರ ಕಲ್ಪಿಸಿದ್ದಾರೆ. ಈ ಸಮಸ್ಯೆಯನ್ನು ಶಾಸಕರ ಗಮನಕ್ಕೆ ತಂದು ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಲು ಸಹಕಾರ ನೀಡಿದ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಬಿ ಬಿ ಸತೀಶ್, ಸ್ಥಳೀಯ ಪಂಚಾಯಿತಿ ಸದಸ್ಯರಾದ ಚೇತನ್, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಖಜಾಂಚಿ ಚೇತನ್ ರವರಿಗೂ ಯೋಗೇಂದ್ರ ಅವರು ಧನ್ಯವಾದ ಸಲ್ಲಿಸಿದ್ದಾರೆ.