ಮಡಿಕೇರಿ ದಸರಾ ಜನೋತ್ಸವ: ದಶಮಂಟಪಗಳ ಶೋಭಯಾತ್ರೆಯಲ್ಲಿ ನಿಯಮ ಉಲ್ಲಂಘಿಸಿ ಡಿಜೆ ಬಳಕೆ | 10 ಮಂಟಪ ಸಮಿತಿ ಹಾಗೂ 62 ಮಂದಿಯ ಮೇಲೆ ಪ್ರಕರಣ ದಾಖಲು

ಮಡಿಕೇರಿ ದಸರಾ ಜನೋತ್ಸವ: ದಶಮಂಟಪಗಳ ಶೋಭಯಾತ್ರೆಯಲ್ಲಿ ನಿಯಮ ಉಲ್ಲಂಘಿಸಿ ಡಿಜೆ ಬಳಕೆ |   10 ಮಂಟಪ ಸಮಿತಿ ಹಾಗೂ 62 ಮಂದಿಯ ಮೇಲೆ ಪ್ರಕರಣ ದಾಖಲು
ದಶಮಂಟಪಗಳ ಶೋಭಯಾತ್ರೆಯಲ್ಲಿ ಸೇರಿದ ಜನಸಾಗರ

ಮಡಿಕೇರಿ: ನಿಯಮ ಉಲ್ಲಂಘಿಸಿ ಧ್ವನಿವರ್ಧಕ ಬಳಸಿದ ಹಿನ್ನೆಲೆ ಮಡಿಕೇರಿಯ 10 ಮಂಟಪ ಸಮಿತಿಗಳ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾತ್ರಿ 10 ಗಂಟೆ ನಂತರ ಸಾರ್ವಜನಿಕ ಸ್ಥಳದಲ್ಲಿ ಹೆಚ್ಚಿನ ಪ್ರಮಾಣದ ಧ್ವನಿವರ್ಧಕವನ್ನು ಬಳಸಬಾರದೆಂಬ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ತಾ. 2 ರಂದು ದಶಮಂಟಪ ಶೋಭಾಯಾತ್ರೆ ವೇಳೆ ಧ್ವನಿವರ್ಧಕ ಬಳಸಲಾಗಿದೆ ಎಂದು ಪೊಲೀಸರು ನೀಡಿದ ಸ್ವಯಂ ಪ್ರೇರಿತ ದೂರಿನಡಿ 10 ಮಂಟಪ ಸಮಿತಿಗಳ ವಿರುದ್ದವೂ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಳ್ಳಲಾಗಿದೆ.

62 ಮಂದಿ ವಿರುದ್ಧ ಎಫ್‌ಐಆರ್:

10 ಮಂಟಪಗಳ ಪದಾಧಿಕಾರಿ ಸೇರಿದಂತೆ ಧ್ವನಿವರ್ಧಕ ಮಾಲೀಕರುಗಳು ಒಳಗೊಂಡಂತೆ ಒಟ್ಟು 62 ಮಂದಿ ವಿರುದ್ಧ ನಗರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ರಾತ್ರಿ 10ರ ನಂತರ ಧ್ವನಿವರ್ಧಕ ಬಳಸದಂತೆ ಪೂರ್ವಭಾವಿ ಸಭೆಗಳನ್ನು ನಡೆಸಿ ಎಚ್ಚರಿಕೆ ನೀಡಿದ್ದರೂ ಧ್ವನಿವರ್ಧಕ ಬಳಕೆಯಾಗಿದೆ. ಇದನ್ನು ಸ್ಥಗಿತಗೊಳಿಸುವಂತೆ ನೀಡಿದ ಸೂಚನೆಯನ್ನು ಪಾಲಿಸದೆ ಆದೇಶ ಉಲ್ಲಂಘನೆಯೊಂದಿಗೆ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡಲಾಗಿದೆ ಈ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪೇಟೆ ಶ್ರೀರಾಮಮಂದಿರ, ದೇಚೂರು ಶ್ರೀರಾಮ ಮಂದಿರ, = ದಂಡಿನ ಮಾರಿಯಮ್ಮ, ಕಂಚಿ ಕಾಮಾಕ್ಷಿ, ಕೋದಂಡ ರಾಮ ದೇವಾಲಯ ಮಂಟಪ ಸಮಿತಿಗಳ ತಲಾ 6 ಮಂದಿ. ಕರವಲೆ = ಭಗವತಿ, ಕೋಟೆ ಮಾರಿಯಮ್ಮ ಮಂಟಪ ಸಮಿತಿಗಳ ತಲಾ 7 ಮಂದಿ, ಕೋಟೆ ಗಣಪತಿಯ 8 ಮಂದಿ, ಚೌಡೇಶ್ವರಿ ಹಾಗೂ = ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯ ಮಂಟಪ ಸಮಿತಿಯ ತಲಾ 5 ಮಂದಿ ವಿರುದ್ಧ ಇದೀಗ ಸೆಕ್ಷನ್ 37, 109, ಬಿಎನ್ಎಸ್ 292 ಅಡಿ ಪ್ರಕರಣಗಳು ದಾಖಲಾಗಿವೆ.