Kodagu

ಮಡಿಕೇರಿ: ಜೈಲಿನಲ್ಲಿ ಮಾರಾಮಾರಿ ಪ್ರಕರಣ,ಗಾಯಾಳು ಸಾವು

admincoorgdaily

ಮಡಿಕೇರಿ: ಜೈಲಿನಲ್ಲಿ ಮಾರಾಮಾರಿ ಪ್ರಕರಣ,ಗಾಯಾಳು ಸಾವು

ಮಡಿಕೇರಿ, ಜೂ. 2: ಮಡಿಕೇರಿ ಹೊರವಲಯದಲ್ಲಿರುವ ಕಾರಾಗೃಹದಲ್ಲಿ ಜಿಲ್ಲಾ ಕೈದಿಗಳೀರ್ವರ ನಡುವೆ ನಡೆದ ಮಾರಾಮಾರಿಯಲ್ಲಿ ಗಂಭೀರ ಗಾಯಗೊಂಡಿದ್ದ ಕೈದಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಟಿ. ಶೆಟ್ಟಿಗೇರಿಯ ನಾಲ್ವರು ಸಿವಿಲ್ ಪ್ರಕರಣದಲ್ಲಿ ಬಂದಿಗಳಾಗಿ ಕಾರಾಗೃಹ ಸೇರಿದ್ದರು.ಈ ಪೈಕಿ ಸೋಮವಾರ,ಹೇಮಂತ್ ಹಾಗೂ ರಾಜೇಶ್ ಎಂಬವರುಗಳ ನಡುವೆ ಅಡುಗೆ ಕೋಣೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭಜಗಳವೇರ್ಪಟ್ಟು ಮಾರಾಮಾರಿ ನಡೆದಿತ್ತು.

ಈ ಸಂದರ್ಭ, ರಾಜೇಶ್ ಚೂರಿಯಿಂದ ಹೇಮಂತ್‌ಗೆ ಇರಿದಿದ್ದು, ಗಂಭೀರ ಗಾಯಗೊಳಗಾಗಿದ್ದ ಹೇಮಂತ್ ನನ್ನು ಕಾರಾಗೃಹದ ಅಧಿಕಾರಿಗಳು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ರಾತ್ರಿ ವೇಳೆ ಹೇಮಂತ್ ಸಾವನ್ನಪ್ಪಿದ್ದಾರೆ. ಮೃತ ಹೇಮಂತ್‌ ತಂದೆ ರವಿ, ತಾಯಿ ಇಂದಿರಾ ಹಾಗೂ ರಾಜೇಶ್‌ನ ಸಹೋದರ ಜಗದೀಶ್ ಕೂಡ ಕಾರಾಗೃಹದಲ್ಲಿ ಬಂಧಿಯಾಗಿದ್ದಾರೆ.