09 ದಿನ ಮಡಿಕೇರಿ ‌ನಗರಸಭೆ ಖಾಲಿ... ಖಾಲಿ...? ಕಾರಣವೇನು ಗೊತ್ತೇ

09 ದಿನ ಮಡಿಕೇರಿ ‌ನಗರಸಭೆ ಖಾಲಿ... ಖಾಲಿ...?  ಕಾರಣವೇನು ಗೊತ್ತೇ
ಮಡಿಕೇರಿ ನಗರಸಭೆ

! ಮಡಿಕೇರಿ, ಏ. 22: ಮಡಿಕೇರಿ ನಗರಸಭೆ ಸದಸ್ಯರು, ಪೌರಾಯುಕ್ತರು, ಅಧಿಕಾರಿಗಳು ಏ.23 ರಿಂದ (ಇಂದಿನಿಂದ) 9 ದಿನಗಳ ಕಾಲ ಪ್ರವಾಸಕ್ಕೆ ತೆರಳಿದ್ದಾರೆ. ಈ ಅವಧಿಯಲ್ಲಿ ನಗರಸಭೆಯಲ್ಲಿ ಆಡಳಿತಾತ್ಮಕವಾಗಿ ತೊಡಕು ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ.

ನಗರಸಭೆ ಅಧ್ಯಕ್ಷರು, ಎಸ್‌ಡಿಪಿಐ ಸದಸ್ಯರು ಸೇರಿದಂತೆ ಕೆಲ ಸದಸ್ಯರು ಹೊರತುಪಡಿಸಿ ಉಳಿದೆಲ್ಲ ಸದಸ್ಯರು, ನಾಮನಿರ್ದೇಶಿತ ಸದಸ್ಯರು, ಪೌರಾಯುಕ್ತರು, ಅಭಿಯಂತರರು, ಗುಮಾಸ್ತರು ಸೇರಿದಂತೆ ಕೆಲ ಸಿಬ್ಬಂದಿ ವರ್ಗದವರು ಮಧ್ಯಪ್ರದೇಶದ ಇಂದೋರ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಕ್ಕೆ ಅಧ್ಯಯನ ಪ್ರವಾಸಕ್ಕಾಗಿ ತಾ. 22ರ ರಾತ್ರಿ ತೆರಳಿದ್ದು, ಅಲ್ಲಿಂದ ಜಮ್ಮು ಕಾಶ್ಮೀರ ಪ್ರವಾಸ ಕೈಗೊಳ್ಳಲಿದ್ದಾರೆ.

ಹೀಗಾಗಿ 9 ದಿನಗಳ ಕಾಲ ಲಭ್ಯವಿರುವುದಿಲ್ಲ. ಪ್ರವಾಸಕ್ಕಾಗಿ ರೂ. 24 ಲಕ್ಷ ವ್ಯಯವಾಗಲಿದೆ. 9 ದಿನಗಳ ಕಾಲ ಪೌರಾಯುಕ್ತರು ಸೇರಿದಂತೆ ಪ್ರಮುಖ ಅಧಿಕಾರಿಗಳು ಇಲ್ಲದ ಕಾರಣ ಸಾರ್ವಜನಿಕರ ಸೇವೆಗೆ ಸಮಸ್ಯೆ ಉಂಟಾಗಬಹುದಾದ ಸಾಧ್ಯತೆ ಇದೆ. ಪ್ರಬಾರ ಅಧಿಕಾರಿಯನ್ನಾಗಿ ತಾಹೀರ್ ಅವರನ್ನು ನೇಮಿಸಲಾಗಿದೆ.