Kodagu

ಮಲ್ಮ ಬೆಟ್ಟ: 59 ಎಕರೆ ಜಾಗ ಮಾರಾಟ ಅಥವಾ ಅರಣ್ಯ ಇಲಾಖೆಗೆ ಹಸ್ತಾಂತರ: ಮುಮ್ತಾಜ್ ಅಲಿ

admincoorgdaily

ಮಲ್ಮ ಬೆಟ್ಟ: 59 ಎಕರೆ ಜಾಗ ಮಾರಾಟ ಅಥವಾ ಅರಣ್ಯ ಇಲಾಖೆಗೆ ಹಸ್ತಾಂತರ: ಮುಮ್ತಾಜ್ ಅಲಿ

ಮಡಿಕೇರಿ: ನೆಲಜಿಯ ಮಲ್ಮ ಬೆಟ್ಟದ ಬಳಿ ಖರೀದಿಸಿದ್ದ ೫೯ ಎಕರೆ ೯೦ ಸೆಂಟ್ ಜಾಗವನ್ನು ಸ್ಥಳೀಯರ ಭಾವನೆಗಳಿಗೆ ಗೌರವ ನೀಡಿ ಮಾರಾಟ ಮಾಡುವುದಾಗಿ ಅಥವಾ ಅರಣ್ಯ ಇಲಾಖೆಗೆ ಹಸ್ತಾಂತರಿಸುವುದಾಗಿ ಶ್ರೀ.ಎಂ.(ಮುಮ್ತಾಜ್ ಅಲಿ) ತಿಳಿಸಿದ್ದಾರೆ. ರಸ್ತೆ ನಿರ್ಮಾಣ ಹಾಗೂ ೧೦ ಎಕರೆ ವಾಣಿಜ್ಯ ಪರಿವರ್ತನೆಗೆ ಅರ್ಜಿ ಸಲ್ಲಿಸಿದ್ದಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

ಹೀಗಾಗಿ ಎಲ್ಲಾ ಕಾಮಗಾರಿಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದೇವೆ ಎಂದರು. ಗೋಶಾಲೆ, ಧ್ಯಾನ ಕೇಂದ್ರ, ಸಂಸ್ಕೃತ ತರಬೇತಿ ಕೇಂದ್ರ ಸ್ಥಾಪಿಸುವ ಉದ್ದೇಶವಿತ್ತು. ಕೆರೆ ನಿರ್ಮಾಣಕ್ಕೆ ಪೊದೆ ತೆರವುಗೊಳಿಸಲಾಗಿತ್ತು, ರಸ್ತೆ ಕಾಮಗಾರಿ ಆರಂಭಿಸಿದ್ದರೂ ನಿಲ್ಲಿಸಲಾಗಿದೆ. ಯಾವುದೇ ಕಟ್ಟಡ ನಿರ್ಮಾಣವಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಬಿದ್ದಂಡ ಲಾಲ್ ಕುಶಾಲಪ್ಪ, ಬಿದ್ದಂಡ ಬೋಪಣ್ಣ ಇದ್ದರು.