ಮಾಕುಟ್ಟ ಬಳಿ ಜೀಪು ಪ್ರಪಾತಕ್ಕೆ ಬಿದ್ದು ವ್ಯಕ್ತಿ ಸಾವು

May 12, 2026 - 19:39
 0  2.3k
ಮಾಕುಟ್ಟ ಬಳಿ ಜೀಪು ಪ್ರಪಾತಕ್ಕೆ ಬಿದ್ದು ವ್ಯಕ್ತಿ ಸಾವು

ವಿರಾಜಪೇಟೆ; ಮಾಕುಟ್ಟ ಬಳಿ ಪ್ರಪಾತಕ್ಕೆ ಉರುಳಿ ಬಿದ್ದ ಪರಿಣಾಮ ಅದರಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಕೇರಳ ರಾಜ್ಯ ಕಣ್ಣೂರು ಜಿಲ್ಲೆಯ ಬಾಲಕೃಷ್ಣ ಎಂಬುವರು ಈ ಅವಘಡದಲ್ಲಿ ಮೃತಪಟ್ಟ ದುರ್ದೈವಿ. ಬಾಲಕೃಷ್ಣ ನಿನ್ನೆ ಬೆಳಿಗ್ಗೆ ಕೊಡಗಿಗೆ ಆಗಮಿಸಿ ಮಧ್ಯಾಹ್ನದ ನಂತರ 3.45 ಕ್ಕೆ ವೀರಾಜಪೇಟೆಯಿಂದ ಕಣ್ಣೂರಿಗೆ ವಾಪಸ್ ಹೊರಟ್ಟಿದ್ದವರು ಕಾಣೆ ಆಗಿರುವ ಬಗ್ಗೆ ವಿರಾಜಪೇಟೆ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಇಂದು ಪೊಲೀಸರು ತನಿಖೆ ಕೈಗೊಂಡಾಗ ಕೇರಳಕ್ಕೆ ಹೋಗುವ ಮಾಕುಟ್ಟ ರಸ್ತೆಯ ಪೆರುಂಬಾಡಿಯಿಂದ 10 ಕಿ.ಮೀ. ದೂರದಲ್ಲಿ ಜೀಪು ಪ್ರಪಾತಕ್ಕೆ ಉರುಳಿ ಬಿದ್ದಿರುವುದನ್ನು ಪತ್ತೆಹಚ್ಚಲಾಗಿತ್ತು. ಈ ಅಪಘಾತದಿಂದ ಬಾಲಕೃಷ್ಣ ಮೃತ ಪಟ್ಡಿದ್ದಾರೆ. ಹೃದಯಾಘಾತ ಸಂಭವಿಸಿ ಈ ಅಪಘಾತ ನಡೆದಿರುವ ಸಾಧ್ಯತೆ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇದೀಗ ಮೃತದೇಹವನ್ನು ಶವ ಪರೀಕ್ಷೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಇರಿಸಲಾಗಿದೆ.

What's Your Reaction?

Like Like 0
Dislike Dislike 1
Love Love 0
Funny Funny 0
Angry Angry 0
Sad Sad 5
Wow Wow 0