Kodagu

ಕಡಂಗದಲ್ಲಿ ಯಶಸ್ವಿಯಾಗಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮ

admincoorgdaily

ಕಡಂಗದಲ್ಲಿ ಯಶಸ್ವಿಯಾಗಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮ

ಕಡಂಗ;ಸ್ಥಳೀಯ ಎಸ್ ಕೆ ಎಸ್ ಎಸ್ ಎಫ್ ಮತ್ತು ಎಸ್‌ ವೈ ಎಸ್ ಕಡಂಗ ಶಾಖಾ ವತಿಯಿಂದ ನಾಲ್ಕನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮ ಮತ್ತು ಧಾರ್ಮಿಕ ಪ್ರಭಾಷಣ ಕಾರ್ಯಕ್ರಮವು ದ ಶನಿವಾರದಂದು ಕಡಂಗ ಕೊಕ್ಕಂಡಬಾಣೆ ಯಲ್ಲಿ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದಲ್ಲಿ 7 ಬಡ ಹೆಣ್ಣು ಮಕ್ಕಳ ವಿವಾಹ ಕಾರ್ಯಕ್ರಮ ನಡೆಸಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ , ಉಪ ಖಾಜಿಗಳಾದ ಅಬ್ದುಲ್ಲ ಮುಸ್ಲಿಯಾರ್ ಎಡಪಾಲ, ವಹಿಸಿದ್ದರು.ಮುಖ್ಯ ಭಾಷಣಗಾರರಾಗಿ ಅಂತಾರಾಷ್ಟ್ರೀಯ ವಾಗ್ಮಿ ಸಿರಾಜುದ್ದಿನ್ ಖಾಸಿಮಿರವರು ಭಾಷಣ ಮಾಡಿದರು. ಕಾರ್ಯಕ್ರಮಕ್ಕೆ ಸಯ್ಯದ್ ಮೊಹಮ್ಮದ್ ಜಮಲುಲೈಲಿ ಪ್ರಾರ್ಥನೆಗೆ ಚಾಲನೆ ನೀಡಿದರು. ಸ್ಥಳೀಯ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು, ರಾಜಕೀಯ ನೇತಾರರು, ಜಿಲ್ಲೆಯ ಹಾಗೂ ಹೊರ ಜಿಲ್ಲೆಗಳಿಂದಲೂ ಸಹಸ್ರರು ಜನರು ಪಾಲ್ಗೊಂಡಿದರು.