ಎಸ್.ವೈ.ಎಸ್ ವತಿಯಿಂದ ಮಾದರಿ ಮದುವೆ ಶತದಿನ ಅಭಿಯಾನ ಕಾರ್ಯಕ್ರಮ
admincoorgdaily
ಮಡಿಕೇರಿ: ಮಾದರಿ ಮದುವೆ ಶತದಿನ ಅಭಿಯಾನ ಎಂಬ ಕಾರ್ಯಕ್ರಮವನ್ನು ಸುನ್ನಿ ಯುವಜನ ಸಂಘ ವತಿಯಿಂದ ನ.೮ರಿಂದ ಫೆ.೧೫ರವರೆಗೆ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಎಸ್‌ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಅಬೂಬಕರ್ ಸಿದ್ದೀಖ್ ತಿಳಿಸಿದರು.
ಅಂದು ಬೆಳಗ್ಗೆ ೯ ಗಂಟೆಗೆ ಎಮ್ಮೆಮಾಡುವಿನ ದರ್ಗಾದ ಸಭಾಂಗಣದಲ್ಲಿ ಮಾದರಿ ಮದುವೆ ಶತದಿನ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ವೈಎಸ್ ರಾಜ್ಯಾಧ್ಯಕ್ಷ ಬಶೀರ್ ಸಅದಿ ವಹಿಸಲಿದ್ದಾರೆ. ಈ ಸಂದರ್ಭ ಸುನ್ನಿ ಉಲಮಾ ಒಕ್ಕೂಟದ ಕೊಡಗು ಜಿಲ್ಲಾಧ್ಯಕ್ಷ ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಕಿಲ್ಲೂರು ಉದ್ಘಾಟಿಸಲಿದ್ದು, ಆಧ್ಯಾತ್ಮ ಗುರು ಸಯ್ಯಿದ್ ವಿ.ಪಿ.ಅಬ್ದುಲ್ ರಹ್ಮಾನ್ ದಾರಿಮಿ ಆಟೀರಿ ತಂಙಳ್, ಕಲ್ಲಿಕೋಟೆ ಮರ್ಕರ್ ಉಪನ್ಯಾಸಕ ಹಾಫಿರ್ ಕೌಸರ್ ಸಖಾಫಿ ಭಾಷಣ ಮಾಡಲಿದ್ದಾರೆ.
ಸಯ್ಯಿದ್ ಇಲ್ಯಾಸ್ ತಂಙಳ್, ಹುಸೈನ್ ಸಖಾಫಿ, ಇಸ್ಮಾಯಿಲ್ ಅಯ್ಯಂಗೇರಿ ಸೇರಿದಂತೆ ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಎಸ್‌ವೈಎಸ್ ರಾಜ್ಯಾಧ್ಯಕ್ಷ ಬಶೀರ್ ಸಅದಿ, ಮಾಜಿ ರಾಜ್ಯಾಧ್ಯಕ್ಷ ಅಬ್ದುಲ್ ಹಫೀಳ್ ಸಅದಿ, ಕೋಶಾಧಿಕಾರಿ ಮನ್ಸೂರ್ ಆಲೀ ತೀರ್ಥಹಳ್ಳಿ, ಜಿಲ್ಲಾಧ್ಯಕ್ಷ ಮುನೀರ್ ಮಹ್‌ಳರಿ, ಸದಸ್ಯರಾದ ಅಹಮ್ಮದ್ ಮದನಿ ಉಪಸ್ಥಿತರಿದ್ದರು.