ನಾಪೋಕ್ಲು:ಶಾಸಕ ಎಎಸ್ ಪೊನ್ನಣ್ಣ ಅವರ ಅನುದಾನದಲ್ಲಿ ಚೇಲಾವರ-ಕೋಡಿರ ಮೊಟ್ಟೆ ಕಾಂಕ್ರೀಟ್ ರಸ್ತೆ ಕಾಮಗಾರಿ ಪೂರ್ಣ
ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಡಿಕೇರಿ ತಾಲೂಕಿನ ನಾಪೋಕ್ಲು ಬ್ಲಾಕ್ ಗೆ ಒಳಪಡುವ ನರಿಯಂದಡ ಗ್ರಾಮ ಪಂಚಾಯತಿಯ ಚೇಲಾವರ-ಕೋಡಿರ ಮೊಟ್ಟೆ ರಸ್ತೆಯ ಕಾಂಕ್ರೀಟಿಕರಣವು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ರವರ ಅನುದಾನದಲ್ಲಿ ಪೂರ್ಣಗೊಂಡಿದೆ. ತಮ್ಮ ಅನುದಾನದಲ್ಲಿ ₹ 5 ಲಕ್ಷಗಳನ್ನು ಮಂಜೂರು ಮಾಡಿ, ಸುಮಾರು 100 ಮೀಟರ್ ಉದ್ದದ ರಸ್ತೆಯ ಕಾಂಕ್ರೀಟೀಕರಣ ಗೊಳಿಸಿ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ಕಾಮಗಾರಿ ಮಂಜೂರು ಮಾಡಿಸಲು ಸಹಕರಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಇಸ್ಮಾಯಿಲ್, ವಲಯ ಕಾಂಗ್ರೆಸ್ ಅಧ್ಯಕ್ಷರಾದ ಕೋಡಿರ ವಿನೋದ್ ನಾಣಯ್ಯ, ಪಕ್ಷದ ಪ್ರಮುಖರು ಹಾಗೂ ಈ ಭಾಗದ ಮುಖಂಡರಿಗೆ ಸದ್ರಿ ರಸ್ತೆಯ ಪ್ರಯೋಜನ ಪಡೆದ ಸಾರ್ವಜನಿಕರು ಮನದಾಳದ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.