ನೆಲ್ಲಿಹುದಿಕೇರಿ ಮುಸ್ಲಿಂ ಜಮಾಅತ್ ಹಾಗೂ ನೈಮಾ ಸಂಸ್ಥೆಯಿಂದ ವತಿಯಿಂದ ಪ್ರಾಂಶುಪಾಲರಾದ ನೌಶಾದ್ ಅವರಿಗೆ ಸನ್ಮಾನ

ನೆಲ್ಲಿಹುದಿಕೇರಿ ಮುಸ್ಲಿಂ ಜಮಾಅತ್ ಹಾಗೂ ನೈಮಾ ಸಂಸ್ಥೆಯಿಂದ ವತಿಯಿಂದ ಪ್ರಾಂಶುಪಾಲರಾದ ನೌಶಾದ್ ಅವರಿಗೆ ಸನ್ಮಾನ

ಸಿದ್ದಾಪುರ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಪ್ರತಿಷ್ಠಿತ ಡಿ ಎಸ್ ಬಿ ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರ ಪ್ರಭಾರವನ್ನು ವಹಿಸಿಕೊಂಡಿರುವ ಪ್ರೊ// ಹೆಚ್.ನೌಶಾದ್ ಅವರಿಗೆ ನೆಲ್ಲಿಹುದಿಕೇರಿ ಮುಸ್ಲಿಂ ಜಮಾಅತ್ ಹಾಗೂ ನೈಮಾ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಈ ಸಂಧರ್ಭ ಜಮಾಅತ್ ಉಪಾಧ್ಯಕ್ಷರಾದ ಮೊಹಮ್ಮದಲಿ, ಕಾರ್ಯದರ್ಶಿ ಅಶ್ರಫ್ ಹಾಜಿ ,ಮಣಿ ಮಾಸ್ಟರ್ ,ಕೆ.ಎಂ ಬಶೀರ್, ಎ.ಕೆ ಹಕೀಮ್, ಸಹ ಕಾರ್ಯದರ್ಶಿ ಲತ್ತೀಫ್ , ನೈಮಾ ಸಂಸ್ಥೆಯ ಅಧ್ಯಕ್ಷರಾದ ಒ.ಎಂ ನೌಶಾದ್, ಸಹ ಕಾರ್ಯದರ್ಶಿ ಜಂಶೀರ್ ಸಿ.ಹೆಚ್, ಮುತ್ತಲಿಬ್ , ಎ.ಎ ಅಬ್ದುಲ್ಲ ಉಪಸ್ತಿತರಿದ್ದರು.